John 12:42 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೂ ಹಿರೀಸಭೆಯವರಲ್ಲಿಯೂ ಸಹ ಅನೇಕರು ಆತನನ್ನು ನಂಬಿದರು, ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು, ಫರಿಸಾಯರ ನಿಮಿತ್ತ ಅವರು ಬಹಿರಂಗವಾಗಿ ಅದನ್ನು ಜನರ ಮುಂದೆ ಅರಿಕೆಮಾಡಿಕೊಳ್ಳಲಿಲ್ಲ.
Kannada BSI Bible 2016
ಆದಾಗ್ಯೂ ಮುಖ್ಯಾಧಿಕಾರಿಗಳಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕರಿಸಲ್ಪಡಬಾರದೆಂದು ಅವರು ಆತನನ್ನು ಒಪ್ಪಿ ಕೊಳ್ಳಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೂ ಹಿರೀಸಭೆಯವರಲ್ಲಿಯೂ ಅನೇಕರು ಆತನನ್ನು ನಂಬಿದರು. ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು ಫರಿಸಾಯರಿಗೆ ಅಂಜಿಕೊಂಡು ಅದನ್ನು ಜನರ ಮುಂದೆ ಹೇಳಲಿಲ್ಲ.
Kannada Bible (KNCL) BSI 2016
ಯೆಹೂದ್ಯರಲ್ಲಿ ಹಲವುಮಂದಿ ಮುಖಂಡರಿಗೆ ಯೇಸುವಿನಲ್ಲಿ ವಿಶ್ವಾಸಮೂಡಿತು. ಆದರೆ ಫರಿಸಾಯರು ಪ್ರಾರ್ಥನಾಮಂದಿರಗಳಿಂದ ತಮಗೆ ಬಹಿಷ್ಕಾರ ಹಾಕಿಯಾರೆಂಬ ಅಂಜಿಕೆಯ ಕಾರಣ ಅವರು ತಮ್ಮ ವಿಶ್ವಾಸವನ್ನು ಬಯಲುಮಾಡಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೂ ಅಧಿಕಾರಿಗಳಲ್ಲಿ ಅನೇಕರು ಆ ಸಮಯದಲ್ಲಿ ಯೇಸುವನ್ನು ನಂಬಿದರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕಾರ ಆಗಬಾರದೆಂದು ಅವರು ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ ಮಾಡಲಿಲ್ಲ.