John 18:38 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪಿಲಾತನು, “ಸತ್ಯವೆಂದರೇನು?” ಎಂದು ಕೇಳಿ, ಮತ್ತೆ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದನು. ಅವನು ಯೆಹೂದ್ಯರಿಗೆ, “ಈ ಮನುಷ್ಯನ ಮೇಲೆ ಅಪವಾದ ಹೊರಿಸಲು ನನಗೆ ಏನೂ ಕಾಣುತ್ತಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಿಲಾತನು, “ಸತ್ಯ ಎಂದರೇನು?” ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ.
Kannada BSI Bible 2016
ಪಿಲಾ ತನು ಆತನಿಗೆ--ಸತ್ಯ ಅಂದರೇನು? ಅಂದನು. ಅವನು ಇದನ್ನು ಕೇಳಿದ ಮೇಲೆ ತಿರಿಗಿ ಯೆಹೂದ್ಯರ ಬಳಿಗೆ ಹೊರಗೆ ಬಂದು ಅವರಿಗೆ--ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಪಿಲಾತನು - ಸತ್ಯವಂದರೇನು? ಅಂದನು. ಇದನ್ನು ಹೇಳಿ ಪಿಲಾತನು ತಿರಿಗಿ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದು - ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸುವದಿಲ್ಲ.
Kannada Bible (KNCL) BSI 2016
ಆಗ ಪಿಲಾತನು, “ಸತ್ಯ, ಸತ್ಯ ಎಂದರೆ ಏನು?” ಎಂದು ಪ್ರಶ್ನಿಸಿ ಅಲ್ಲಿ ನಿಲ್ಲದೆ ಹೊರಗೆಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಿಲಾತನು ಯೇಸುವಿಗೆ, “ಸತ್ಯ ಎಂದರೇನು?” ಎಂದನು. ಅವನು ಇದನ್ನು ಕೇಳಿದ ಮೇಲೆ ತಿರುಗಿ ಯೆಹೂದ್ಯರ ಬಳಿಗೆ ಹೋಗಿ ಅವರಿಗೆ, “ನಾನು ಈತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.