John 18:40 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು.
Kannada BSI Bible 2016
ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಅವರು - ಇವನನ್ನು ಬೇಡ, ಬರಬ್ಬನನ್ನು ಬಿಟ್ಟುಕೊಡಬೇಕು ಎಂದು ತಿರಿಗಿ ಕೂಗಿ ಹೇಳಿದರು. ಈ ಬರಬ್ಬನು ಕಳ್ಳನಾಗಿದ್ದನು.
Kannada Bible (KNCL) BSI 2016
ಅದಕ್ಕೆ ಅವರು, “ಬೇಡ, ಇವನು ಬೇಡ. ನಮಗೆ ಬರಬ್ಬನನ್ನು ಬಿಟ್ಟುಕೊಡಿ,” ಎಂದು ಬೊಬ್ಬೆಹಾಕಿದರು. ಬರಬ್ಬನೋ ಒಬ್ಬ ದರೋಡೆಕೋರನಾಗಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಅವರೆಲ್ಲರೂ ತಿರುಗಿ, “ಇವನು ಬೇಡ, ನಮಗೆ ಬರಬ್ಬನನ್ನು ಬಿಟ್ಟುಕೊಡು,” ಎಂದು ಕೂಗಿಕೊಂಡರು. ಆ ಬರಬ್ಬನು ದರೋಡೆಕೋರನಾಗಿದ್ದನು.