John 6:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲಾಗಿ ಅವರು ಹುಟ್ಟು ಹಾಕುತ್ತಾ ಸುಮಾರು ಒಂದು ಹರದಾರಿ ದೂರ ಹೋದ ಬಳಿಕ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ನೋಡಿ ಭಯಪಟ್ಟರು.
Kannada BSI Bible 2016
ಹೀಗೆ ಅವರು ಹುಟ್ಟು ಹಾಕುತ್ತಾ ಒಂದು ಹರದಾರಿಯಷ್ಟು ದೂರ ಹೋದ ಮೇಲೆ ಯೇಸು ಸಮುದ್ರದ ಮೇಲೆ ನಡೆದು ತಮ್ಮ ದೋಣಿಯ ಕಡೆಗೆ ಸವಿಾಪಿಸುತ್ತಿರು ವದನ್ನು ಅವರು ಕಂಡು ಭಯಪಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲಾಗಿ ಅವರು ಹುಟ್ಟುಹಾಕುತ್ತಾ ಹೆಚ್ಚು ಕಡಿಮೆ ಒಂದು ಹರದಾರಿ ದೂರ ಹೋದ ಬಳಿಕ ಯೇಸು ಸಮುದ್ರದ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವದನ್ನು ನೋಡಿ ಅಂಜಿದರು.
Kannada Bible (KNCL) BSI 2016
ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ದೋಣಿಯನ್ನು ನಡೆಸುತ್ತಾ ಸುಮಾರು ಐದಾರು ಕಿಲೋಮೀಟರಿನಷ್ಟು ದೂರ ಹೋದ ಮೇಲೆ ಯೇಸು ಸರೋವರದ ಮೇಲೆ ನಡೆದು ದೋಣಿಯ ಕಡೆಗೆ ಸಮೀಪಿಸುತ್ತಿರುವುದನ್ನು ಅವರು ಕಂಡು, ಭಯಪಟ್ಟರು.