John 7:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೇಸುವಿನ ಬಗ್ಗೆ ಜನರು ಹೇಳುತ್ತಿದ್ದ ಈ ಸಂಗತಿಗಳನ್ನು ಫರಿಸಾಯರು ಕೇಳಿದರು. ಆದ್ದರಿಂದ ಮಹಾಯಾಜಕರು ಮತ್ತು ಫರಿಸಾಯರು ಯೇಸುವನ್ನು ಬಂಧಿಸುವುದಕ್ಕಾಗಿ ದೇವಾಲಯದ ಸಿಪಾಯಿಗಳಲ್ಲಿ ಕೆಲವರನ್ನು ಕಳುಹಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ಆತನ ವಿಷಯವಾಗಿ ಗೊಣಗುಟ್ಟಿದ ಮಾತುಗಳನ್ನು ಫರಿಸಾಯರು ಕೇಳಿಸಿಕೊಂಡು ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಬಂಧಿಸಲು ದೇವಾಲಯದ ಕಾವಲುಗಾರರನ್ನು ಕಳುಹಿಸಿದರು.
Kannada BSI Bible 2016
ಆತನ ವಿಷಯವಾಗಿ ಜನರು ಗುಣುಗುಟ್ಟಿದ ರೆಂದು ಫರಿಸಾಯರು ಕೇಳಿದರು; ಫರಿಸಾಯರೂ ಪ್ರಧಾನಯಾಜಕರೂ ಆತನನ್ನು ಹಿಡಿಯುವದಕ್ಕೆ ಅಧಿ ಕಾರಿಗಳನ್ನು ಕಳುಹಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜನರು ಆತನ ವಿಷಯವಾಗಿ ಗುಜುಗುಜು ಆಡಿದ ಈ ಮಾತುಗಳನ್ನು ಫರಿಸಾಯರು ಕೇಳಲು ಮಹಾಯಾಜಕರೂ ಫರಿಸಾಯರೂ ಆತನನ್ನು ಹಿಡಿಯುವದಕ್ಕೆ ಓಲೇಕಾರರನ್ನು ಕಳುಹಿಸಿದರು.
Kannada Bible (KNCL) BSI 2016
ಯೇಸು ಸ್ವಾಮಿಯನ್ನು ಕುರಿತು ಜನರು ಹೀಗೆ ಆಡುತ್ತಿದ್ದ ಗುಸುಗುಸು ಮಾತು ಫರಿಸಾಯರ ಕಿವಿಗೆ ಮುಟ್ಟಿತು. ಅವರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸಲು ಕಾಲಾಳುಗಳನ್ನು ಕಳುಹಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೇಸುವಿನ ವಿಷಯವಾಗಿ ಜನರು ತಮ್ಮತಮ್ಮೊಳಗೆ ಮಾತನಾಡುವುದನ್ನು ಫರಿಸಾಯರು ಕೇಳಿದರು. ಫರಿಸಾಯರು ಮತ್ತು ಮುಖ್ಯಯಾಜಕರು ಯೇಸುವನ್ನು ಬಂಧಿಸಲು ಕಾವಲುಗಾರರನ್ನು ಕಳುಹಿಸಿದರು.