Jonah 1:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಿರುಗಾಳಿಯೂ ಸಮುದ್ರದ ತೆರೆಗಳೂ ಇನ್ನೂ ಬಲವಾಗಿ ಬೀಸತೊಡಗಿದವು. ಆಗ ಅವರು ಯೋನನಿಗೆ, “ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಏನು ಮಾಡಬೇಕು? ಸಮುದ್ರವು ಶಾಂತವಾಗಬೇಕಾದರೆ ನಾವೀಗ ನಿನಗೆ ಏನು ಮಾಡಬೇಕು?” ಎಂದು ಕೇಳಿದಾಗ
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಸಮುದ್ರವು ಮತ್ತಷ್ಟು ಅಲ್ಲೋಲಕಲ್ಲೋಲವಾದ ಕಾರಣ ಅವರು ಯೋನನಿಗೆ “ಸಮುದ್ರವು ಶಾಂತವಾಗುವ ಹಾಗೆ ನಿನ್ನನ್ನು ಏನು ಮಾಡೋಣ?” ಎಂದು ಕೇಳಿದರು.
Kannada BSI Bible 2016
ಆಗ ಅವರು ಅವನಿಗೆ--ಸಮುದ್ರವು ನಮಗೆ ಶಾಂತವಾಗುವ ಹಾಗೆ ನಿನಗೆ ಏನು ಮಾಡಬೇಕು? ಯಾಕಂದರೆ ಸಮುದ್ರವು ಹೆಚ್ಚಾಗಿ ಉಬ್ಬುತ್ತಾ ಬರುತ್ತಿದೆ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಳಿಕ ಸಮುದ್ರವು ಹೆಚ್ಚೆಚ್ಚಾಗಿ ಅಲ್ಲಕಲ್ಲೋಲವಾದ ಕಾರಣ ಅವರು - ನಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವ ಹಾಗೆ ನಿನ್ನನ್ನು ಏನು ಮಾಡೋಣ ಎಂದು ಪ್ರಶ್ನೆಮಾಡಲು ಅವನು ಅವರಿಗೆ -
Kannada Bible (KNCL) BSI 2016
ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ: “ಸಮುದ್ರವು ಶಾಂತವಾಗಬೇಕಾದರೆ ನಿನ್ನನ್ನು ಏನು ಮಾಡಬೇಕು? ಹೇಳು,” ಎಂದು ಕೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ, “ಸಮುದ್ರ ಶಾಂತವಾಗಬೇಕಾದರೆ, ನಿನ್ನನ್ನು ಏನು ಮಾಡಬೇಕು? ಹೇಳು,” ಎಂದು ಕೇಳಿದರು.