Jonah 2:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ನಾನು, ‘ನಾನು ನಿನ್ನ ಕಣ್ಣೆದುರಿನಿಂದ ಹೊರದೂಡಲ್ಪಟ್ಟಿದ್ದೇನೆ’ ಅಂದುಕೊಂಡೆನು. ಆದರೂ ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ನೋಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದುಕೊಂಡೆನು; ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು?’
Kannada BSI Bible 2016
ಆಗ ನಾನು ಹೇಳಿದ್ದು--ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಸಾನ್ನಿಧ್ಯದಿಂದ ಬಿಸಾಡಲ್ಪಟ್ಟಿದ್ದೇನೆ ಅಂದುಕೊಂಡೆನು; ಆದರೂ ನಿನ್ನ ಪರಿಶುದ್ಧಾಲಯವನ್ನು ಪುನಃ ದರ್ಶನಮಾಡುವೆನು.
Kannada Bible (KNCL) BSI 2016
ನಿನ್ನ ಸನ್ನಿಧಿಯಿಂದ ನಾನಿನ್ನು ಬಹಿಷ್ಕೃತ ಕಾಣೆನೆಂದೂ ನಿನ್ನ ಪವಿತ್ರಾಲಯ ನಿರುತ. ಈ ಭಾಗ್ಯಗಳೆಲ್ಲ ಎನಗಿಲ್ಲವೆಂದು ಪರಿಪರಿಯಾಗಿ ಮರುಗುತಿರುವೆನಿಂದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾನು ಹೇಳಿದ್ದು, ‘ನಿಮ್ಮ ಕಣ್ಣುಗಳ ಎದುರಿನಿಂದ ಬಹಿಷ್ಕೃತನಾಗಿದ್ದೇನೆ. ಆದರೂ ನಾನು ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಪುನಃ ನೋಡುವೆನು.’