Joshua 10:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದಕ್ಕಿಂತ ಮೊದಲೆಂದೂ ಹೀಗಾಗಿರಲಿಲ್ಲ; ಆಮೇಲೆಯೂ ಆಗಲಿಲ್ಲ. ಯೆಹೋವನು ಒಬ್ಬ ಮಾನವನ ಆಜ್ಞೆಯನ್ನು ಪಾಲಿಸಿದ ದಿನ ಅದಾಗಿತ್ತು. ಇಸ್ರೇಲರಿಗೋಸ್ಕರ ಯೆಹೋವನು ನಿಜವಾಗಿಯೂ ಯುದ್ಧಮಾಡುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿನವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು.
Kannada BSI Bible 2016
ಕರ್ತನು ಒಬ್ಬ ಮನುಷ್ಯನ ಮಾತನ್ನು ಕೇಳಿದಂಥಾ ಆ ದಿನಕ್ಕೆ ಸಮಾನ ವಾದ ದಿನವು ಪೂರ್ವದಲ್ಲಿಯೂ ಇಲ್ಲ, ಮುಂದೆಯೂ ಇಲ್ಲ; ಯಾಕಂದರೆ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿವಸವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು.
Kannada Bible (KNCL) BSI 2016
ಆ ಪ್ರಕಾರ ಹಿಂದೆಯಾಗಲಿ ಮುಂದೆಯಾಗಲಿ ಸರ್ವೇಶ್ವರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟಂಥ ದಿವಸ ಇಲ್ಲವೇ ಇಲ್ಲ! ಸರ್ವೇಶ್ವರಸ್ವಾಮಿ ತಾವೇ ಇಸ್ರಯೇಲರ ಪರವಾಗಿ ಯುದ್ಧಮಾಡುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಒಬ್ಬ ಮನುಷ್ಯನ ಮಾತನ್ನು ಕೇಳಿದಂಥ ಆ ದಿನಕ್ಕೆ ಸಮಾನವಾದ ದಿನವು ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ. ಏಕೆಂದರೆ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.