Joshua 10:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನನ್ನೊಂದಿಗೆ ಬಂದು ಗಿಬ್ಯೋನಿನ ಮೇಲೆ ಧಾಳಿಮಾಡಲು ಸಹಾಯಮಾಡಿರಿ. ಗಿಬ್ಯೋನ್ ಯೆಹೋಶುವನೊಂದಿಗೂ ಇಸ್ರೇಲರೊಂದಿಗೂ ಶಾಂತಿಒಪ್ಪಂದ ಮಾಡಿಕೊಂಡಿದೆ” ಎಂದು ಬೇಡಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀವು ಬಂದು ನನಗೆ ಸಹಾಯಮಾಡಿರಿ, ನಾವು ಯೆಹೋಶುವನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ಒಡಂಬಡಿಕೆ ಮಾಡಿಕೊಂಡಿರುವ ಗಿಬ್ಯೋನ್ಯರನ್ನು ಸೋಲಿಸೋಣ” ಎಂದು ಹೇಳಿ ಕಳುಹಿಸಿದನು.
Kannada BSI Bible 2016
ಗಿಬ್ಯೋನು ಯೆಹೋಶುವನ ಸಂಗಡವೂ ಇಸ್ರಾಯೇಲ್‌ ಮಕ್ಕಳ ಸಂಗಡವೂ ಸಮಾಧಾನಮಾಡಿಕೊಂಡದ್ದರಿಂದ ನಾವು ಅದನ್ನು ಹೊಡೆಯುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಬಂದು ನನಗೆ ಸಹಾಯ ಮಾಡಿರಿ; ನಾವು ಯೆಹೋಶುವನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ಒಡಂಬಡಿಕೆಮಾಡಿಕೊಂಡ ಗಿಬ್ಯೋನ್ಯರನ್ನು ಸೋಲಿಸೋಣ ಎಂದು ಹೇಳಿಸಿದನು.
Kannada Bible (KNCL) BSI 2016
“ನೀವು ಬಂದು ನನಗೆ ಸಹಾಯಮಾಡಿ, ನಾವು ಯೆಹೋಶುವನೊಂದಿಗೂ ಇಸ್ರಯೇಲರೊಂದಿಗೂ ಒಪ್ಪಂದ ಮಾಡಿಕೊಂಡು ಗಿಬ್ಯೋನ್ಯರನ್ನು ಸೋಲಿಸೋಣ,” ಎಂದು ಹೇಳಿಕಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಗಿಬ್ಯೋನರು ಯೆಹೋಶುವನ ಮತ್ತು ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡದ್ದರಿಂದ ನಾವು ಅದನ್ನು ದಾಳಿಮಾಡುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ,” ಎಂದು ಹೇಳಿ ಕಳುಹಿಸಿದನು.