Joshua 12:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಓಗನು ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಮತ್ತು ಬಾಷಾನಿನ ಎಲ್ಲ ಪ್ರದೇಶ, ಇವುಗಳನ್ನು ಆಳುತ್ತಿದ್ದನು. ಗೆಷೂರ್ಯರು ಮತ್ತು ಮಾಕತೀ ಜನರು ವಾಸಮಾಡುವ ಪ್ರದೇಶವು ಇವನ ರಾಜ್ಯದ ಮೇರೆಯಾಗಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯದ ಮೇರೆಯವರೆಗೆ ಹಬ್ಬಿದ ಗಿಲ್ಯಾದಿನ ಅರ್ಧಪ್ರಾಂತ್ಯವನ್ನು ಕೂಡ ಓಗನು ಆಳುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನ ರಾಜ್ಯ ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು.
Kannada BSI Bible 2016
ಹೆರ್ಮೋನ್ ಬೆಟ್ಟವನ್ನೂ ಸಲ್ಕಾವನ್ನೂ ಗೆಷೂರ್ಯರ ಮಾಕತೀಯರ ಮೇರೆಯ ವರೆಗೂ ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯಾಗಿದ್ದ ಗಿಲ್ಯಾದಿನ ಅರ್ಧದ ವರೆಗೂ ಇರುವ ಬಾಷಾನೆಲ್ಲಾ ಆಳಿಕೊಂಡಿದ್ದ ರಾಕ್ಷಸರಲ್ಲಿ ಮಿಕ್ಕ ಬಾಷಾನಿನ ಅರಸನಾದ ಓಗನೂ ಇವರೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತವು ಇವೇ ಇವನ ರಾಜ್ಯ.
Kannada Bible (KNCL) BSI 2016
ಇವನ ರಾಜ್ಯ, ಹೆರ್ಮೋನ್ ಮಲೆನಾಡು, ಸಲ್ಕಾನಗರ, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ನಾಡು, ಹೆಷ್ಬೋನಿನ ಅರಸನದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತ್ಯ ಇವುಗಳಿಂದ ಕೂಡಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.