Joshua 13:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲರು ಬೆಯೋರನ ಮಗನಾದ ಬಿಳಾಮನನ್ನು ಕೊಂದರು. (ಬಿಳಾಮನು ಮಂತ್ರ ವಿದ್ಯೆಯಿಂದ ಭವಿಷ್ಯವನ್ನು ಹೇಳುತ್ತಿದ್ದನು.) ಯುದ್ಧದಲ್ಲಿ ಇಸ್ರೇಲರು ಬಹಳಷ್ಟು ಜನರನ್ನು ಕೊಂದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನಾಗಿದ್ದ ಬಿಳಾಮನೂ ಇದ್ದನು.
Kannada BSI Bible 2016
ಇದಲ್ಲದೆ ಇಸ್ರಾಯೇಲ್‌ ಮಕ್ಕಳು ಸಂಹರಿಸಿದ ಇತರರ ಸಂಗಡ ಬೆಯೋರನ ಮಗನಾದ ಬಿಳಾಮ ನೆಂಬ ಕಣಿ ಹೇಳುವವನನ್ನು ಕತ್ತಿಯಿಂದ ಕೊಂದು ಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಇದ್ದನು.
Kannada Bible (KNCL) BSI 2016
ಇಸ್ರಯೇಲರು ಕತ್ತಿಗೆ ತುತ್ತಾಗಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಸೇರಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಇಸ್ರಾಯೇಲರು ಸಂಹರಿಸಿದ ಇತರರ ಸಂಗಡ ಬೆಯೋರನ ಮಗನಾದ ಬಿಳಾಮನೆಂಬ ಕಣಿ ಹೇಳುವವನನ್ನು ಖಡ್ಗದಿಂದ ಕೊಂದುಹಾಕಿದರು.