Joshua 15:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಸೀಮೆಯು ಈಜಿಪ್ಟಿನ ಅಚ್ಮೋನಿನ ಹಳ್ಳಕ್ಕೆ ಮುಂದುವರೆದು ಮೆಡಿಟರೆನಿಯನ್ ಸಮುದ್ರದವರೆಗೆ ಹಬ್ಬಿತ್ತು. ಈ ಭೂಮಿಯೆಲ್ಲಾ ಅವರ ದಕ್ಷಿಣ ಸೀಮೆಯಲ್ಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರವನ್ನು ಸೇರುವುದು. ಇದು ಅದರ ತೆಂಕಣ ಮೇರೆ.
Kannada BSI Bible 2016
ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಚ್ಮೋನಿನ ಮೇಲೆ ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರದಲ್ಲಿ ಮುಗಿಯುವದು. ಇದು ಅದರ ತೆಂಕಣ ಮೇರೆ.
Kannada Bible (KNCL) BSI 2016
ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ. ಅಚ್ಮೋನಿನ ಮೇಲೆ ಈಜಿಪ್ಟಿನ ನದಿಗೆ ಬಂದು ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಇದು ಅದರ ತೆಂಕಣ ಎಲ್ಲೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಲ್ಲಿಂದ ಈಜಿಪ್ಟನ ಅಚ್ಮೋನ ನದಿಗೆ ಬಂದು ಮೆಡಿಟೆರಿಯನ್ ಸಮುದ್ರದವರೆಗೆ ಹೋಗಿ ಸೇರುವುದು. ಇದೇ ಯೆಹೂದದ ದಕ್ಷಿಣ ಮೇರೆ.