Joshua 15:47 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಷ್ಡೋದಿನ ಸುತ್ತಮುತ್ತಲಿನ ಎಲ್ಲ ಕ್ಷೇತ್ರ ಮತ್ತು ಅಲ್ಲಿಯ ಸಣ್ಣ ಊರುಗಳು ಯೆಹೂದ ಪ್ರದೇಶದ ಭಾಗವಾಗಿದ್ದವು. ಯೆಹೂದದ ಜನರು ಗಾಜಾದ ಸುತ್ತಮುತ್ತಲಿನ ಕ್ಷೇತ್ರ ಮತ್ತು ಹತ್ತಿರದ ಊರುಕೇರಿಗಳನ್ನೂ ಹೊಲಗದ್ದೆಗಳನ್ನೂ ಪಡೆದುಕೊಂಡರು. ಅವರ ನೆಲವು ಈಜಿಪ್ಟಿನ ನದಿಯವರೆಗೂ ವಿಸ್ತರಿಸಿತ್ತು; ಮೆಡಿಟರೆನಿಯನ್ ಸಮುದ್ರದ ತೀರದುದ್ದಕ್ಕೂ ಚಾಚಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತು ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ ಪಟ್ಟಣಗಳು; ಗಾಜಾ ಸಂಸ್ಥಾನ ಹಾಗೂ ಐಗುಪ್ತ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ, ಪಟ್ಟಣಗಳು.
Kannada BSI Bible 2016
ಅಷ್ಡೋದ್ ಅದರ ಪಟ್ಟಣಗಳೂ ಗ್ರಾಮಗಳೂ ಗಾಜಾ, ಅದರ ಪಟ್ಟಣಗಳೂ ಗ್ರಾಮಗಳೂ ಐಗುಪ್ತದ ನದಿ, ದೊಡ್ಡ ಸಮುದ್ರ, ಅದರ ಮೇರೆ, ಇವುಗಳ ವರೆಗೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಅಷ್ಡೋದ್ ಸಂಸ್ಥಾನವೂ ಅದರ ಗ್ರಾಮನಗರಗಳೂ; ಗಾಜಾ ಸಂಸ್ಥಾನವೂ ಐಗುಪ್ತಹಳ್ಳದ ಉತ್ತರದಲ್ಲಿ ಮತ್ತು ಮಹಾಸಾಗರತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ ನಗರಗಳೂ;
Kannada Bible (KNCL) BSI 2016
ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ-ನಗರಗಳು; ಗಾಜಾ ಸಂಸ್ಥಾನ ಹಾಗೂ ಈಜಿಪ್ಟಿನ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲ ಗ್ರಾಮ, ನಗರಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಷ್ಡೋದ್ ಪಟ್ಟಣ ಮತ್ತು ಅದರ ಸುತ್ತಲಿನ ಪಟ್ಟಣಗಳೂ ಗ್ರಾಮಗಳೂ, ಗಾಜಾ, ಅದರ ಪಟ್ಟಣಗಳು, ಅದರ ಗ್ರಾಮಗಳು. ಈಜಿಪ್ಟಿನ ಕಲ್ಲಿನ ನಾಲೆ, ಮೆಡಿಟೆರಿಯನ್ ಸಮುದ್ರ, ಅದರ ಮೇರೆ ಇವುಗಳವರೆಗೂ ಇತ್ತು.