Joshua 18:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದಿಂದ ಆ ಸೀಮೆಯು ದಕ್ಷಿಣಕ್ಕೆ ತಿರುಗಿಕೊಂಡು ಆ ಬೆಟ್ಟದ ಪಶ್ಚಿಮಭಾಗದ ಜೊತೆಗೆ ಮುಂದುವರೆಯುತ್ತದೆ. ಆ ಸೀಮೆಯು ಕಿರ್ಯತ್ಯಾರೀಮ್ ಎಂಬ ಕಿರ್ಯತ್‌ಬಾಳ್‌ಗೆ ಹೋಗುತ್ತದೆ. ಈ ಪಟ್ಟಣವು ಯೆಹೂದ್ಯರಿಗೆ ಸೇರಿದ್ದು. ಇದು ಪಶ್ಚಿಮದಿಕ್ಕಿನ ಸೀಮೆಯಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರ ಮೇರೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು ಕಿರ್ಯಾತ್ ಬಾಳ್ ಎನ್ನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯಾತ್ಯಾರೀಮ್ ಎಂಬ ಪಟ್ಟಣದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ಪಡುವಣ ಮೇರೆ.
Kannada BSI Bible 2016
ಇದಲ್ಲದೆ ಆ ಮೇರೆಯು ದಕ್ಷಿಣ ಮೂಲೆಗೆ ಎದುರಾಗಿರುವ ಬೇತ್‌ಹೋರೋನಿಗೆ ಎದುರಾದ ಬೆಟ್ಟವನ್ನು ಹಿಡಿದು ದಕ್ಷಿಣವಾಗಿ ಸಮುದ್ರದ ಮೂಲೆಯನ್ನು ಸುತ್ತಿಕೊಂಡು ಕಿರ್ಯತ್ಯಾರೀಮ್ ಎಂಬ ಯೂದನ ಮಕ್ಕಳ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವದು. ಇದು ಪಶ್ಚಿಮ ಮೂಲೆಯಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೇರೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು ಕಿರ್ಯತ್‍ಬಾಳ್ ಅನ್ನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ಪಟ್ಟಣದಲ್ಲಿ ಮುಗಿಯುತ್ತದೆ. ಇದೇ ಅವರ ಪಡುವಣ ಮೇರೆ.
Kannada Bible (KNCL) BSI 2016
ಈ ಎಲ್ಲೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು, ಕಿರ್ಯತ್ ಬಾಳ್ ಎನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ನಗರದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ವಂಶಸ್ಥರ ಪಶ್ಚಿಮದ ಎಲ್ಲೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಆ ಮೇರೆಯು ದಕ್ಷಿಣ ಎಲ್ಲೆಗೆ ಎದುರಾಗಿರುವ ಬೇತ್ ಹೋರೋನಿಗೆ ಎದುರಾಗಿ ಬೆಟ್ಟವನ್ನು ಹಿಡಿದು, ದಕ್ಷಿಣವಾಗಿ ಸುತ್ತಿಕೊಂಡು ಕಿರ್ಯತ್ ಯಾರೀಮ್ ಎಂಬ ಯೆಹೂದ ಗೋತ್ರದ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವುದು. ಇದು ಪಶ್ಚಿಮ ಎಲ್ಲೆಯಾಗಿತ್ತು.