Joshua 18:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೋರ್ಡನ್ ನದಿಯು ಅವರ ಪೂರ್ವದಿಕ್ಕಿನ ಮೇರೆ. ಬೆನ್ಯಾಮೀನ್ ಗೋತ್ರಗಳ ಸ್ವಾಸ್ತ್ಯದ ಸುತ್ತಲಿನ ಮೇರೆಯು ಇದೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೊರ್ದನ್ ನದಿಯೇ ಅವರ ಪೂರ್ವ ದಿಕ್ಕಿನ ಮೇರೆಯು.
Kannada BSI Bible 2016
ಮೂಡಣ ಭಾಗದಲ್ಲಿ ಯೊರ್ದನ್‌ ಅದರ ಮೇರೆ ಯಾಗಿತ್ತು. ಇದು ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಸುತ್ತಲಿರುವ ಮೇರೆಗಳ ಒಳಗಿರುವ ಬಾಧ್ಯತೆಯಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದೇ ದಕ್ಷಿಣದಿಕ್ಕಿನ ಮೇರೆಯು. ಯೊರ್ದನ್ ಹೊಳೆಯೇ ಅವರ ಪೂರ್ವದಿಕ್ಕಿನ ಮೇರೆ. ಬೆನ್ಯಾಮೀನ್ ಗೋತ್ರಗಳ ಸ್ವಾಸ್ತ್ಯದ ಸುತ್ತಣ ಮೇರೆಯು ಇದೇ.
Kannada Bible (KNCL) BSI 2016
ಜೋರ್ಡನ್ ನದಿಯೇ ಅವರ ಪೂರ್ವದಿಕ್ಕಿನ ಸರಹದ್ದು, ಬೆನ್ಯಾಮೀನ್ ಗೋತ್ರಗಳ ಸೊತ್ತಿನ ಸುತ್ತಣ ಎಲ್ಲೆ ಇದೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯೇ ಅದರ ಮೇರೆಯಾಗಿತ್ತು. ಇದು ಬೆನ್ಯಾಮೀನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸುತ್ತಲಿರುವ ಮೇರೆಗಳ ಸೊತ್ತಾಗಿತ್ತು.