Joshua 2:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದಕ್ಕೆ ಅವಳು, “ಹಾಗೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಳು. ಆ ಜನರು ಅವಳ ಮನೆಯಿಂದ ಹೊರಟರು. ಆಗ ಆ ಹೆಂಗಸು ಆ ಕೆಂಪು ಹಗ್ಗವನ್ನು ಕಿಟಿಕಿಗೆ ಕಟ್ಟಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಅವಳು “ನಿಮ್ಮ ಮಾತಿನಂತೆಯೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೊರಟು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಿಕಿಗೆ ಕಟ್ಟಿದಳು.
Kannada BSI Bible 2016
ಅದಕ್ಕೆ ಆಕೆಯು--ನಿಮ್ಮ ಮಾತುಗಳ ಪ್ರಕಾರವೇ ಆಗಲಿ ಎಂದು ಹೇಳಿ ಅವರನ್ನು ಕಳುಹಿಸಿಬಿಟ್ಟಳು; ಅವರು ಹೋದಾಗ ಆ ಕೆಂಪು ನೂಲಿನ ದಾರವನ್ನು ಕಿಟಿಕಿಯಲ್ಲಿ ಕಟ್ಟಿದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕವಳು - ನಿಮ್ಮ ಮಾತಿನಂತೆಯೇ ಆಗಲಿ ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಕಿಗೆ ಕಟ್ಟಿದಳು.
Kannada Bible (KNCL) BSI 2016
ಅದಕ್ಕವಳು, “ನಿಮ್ಮ ಮಾತಿನಂತೆಯೇ ಆಗಲಿ,” ಎಂದು ಹೇಳಿ ಅವರನ್ನು ಕಳುಹಿಸಿದಳು. ಅವರು ಹೊರಟುಹೋದ ಮೇಲೆ ಆ ಕೆಂಪುದಾರವನ್ನು ಕಿಟಕಿಗೆ ಕಟ್ಟಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಆಕೆಯು, “ನಿಮ್ಮ ಮಾತುಗಳ ಪ್ರಕಾರವೇ ಆಗಲಿ,” ಎಂದು ಹೇಳಿದಳು. ಅನಂತರ ಅವರನ್ನು ಕಳುಹಿಸಿಬಿಟ್ಟಳು. ಅವರು ಹೋದಾಗ, ಆ ಕಡುಗೆಂಪು ಹಗ್ಗವನ್ನು ಕಿಟಿಕಿಯಲ್ಲಿ ಕಟ್ಟಿದಳು.