Joshua 20:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮಲ್ಲಿ ಒಬ್ಬನು ತಿಳಿಯದೆ ಆಕಸ್ಮಿಕವಾಗಿ ನರಹತ್ಯ ಮಾಡಿದರೆ ಅವನು ಯಾವುದಾದರೊಂದು ಆಶ್ರಯನಗರಕ್ಕೆ ಹೋಗಿ ಅಡಗಿಕೊಳ್ಳಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮಲ್ಲಿ ತಿಳಿಯದೆ ಆಕಸ್ಮಾತ್ತಾಗಿ ನರಹತ್ಯಮಾಡಿದವನು ಅಲ್ಲಿಗೆ ಓಡಿಹೋಗಲಿ. ಹತವಾದವನ ಸಮೀಪ ಬಂಧುವು ಮುಯ್ಯಿತೀರಿಸದಂತೆ ಅವು ನಿಮಗೆ ಆಶ್ರಯಸ್ಥಾನಗಳಾಗಿರಲಿ.
Kannada BSI Bible 2016
ಅವು ನಿಮಗೆ ರಕ್ತದ ಸೇಡು ತೀರಿಸುವ ವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮಲ್ಲಿ ತಿಳಿಯದೆ ಅಕಸ್ಮಾತ್ತಾಗಿ ನರಹತ್ಯ ಮಾಡಿದವನು ಅಲ್ಲಿಗೆ ಓಡಿಹೋಗಲಿ. ಹತವಾದವನ ಸಮೀಪಬಂಧುವು ಮುಯ್ಯಿತೀರಿಸದಂತೆ ಅವು ನಿಮಗೆ ಆಶ್ರಯಸ್ಥಾನಗಳಾಗುವವು.
Kannada Bible (KNCL) BSI 2016
ನಿಮ್ಮಲ್ಲಿ ಯಾರಾದರು ಅರಿಯದೆ ಅಕಸ್ಮಾತ್ತಾಗಿ ನರಹತ್ಯೆ ಮಾಡಿದ್ದೇ ಆದರೆ ಅಂಥವನು ಅಲ್ಲಿಗೆ ಓಡಿಹೋಗಲಿ. ಹತನಾದವನ ಹತ್ತಿರದ ಬಂಧು ಮುಯ್ಯಿತೀರಿಸದಂತೆ ಆ ನಗರಗಳು ನಿಮಗೆ ಆಶ್ರಯ ಸ್ಥಾನವಾಗಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾವನಾದರು ಅರಿಯದೆ ಅಕಸ್ಮಾತ್ತಾಗಿ ಕೈತಪ್ಪಿ ಕೊಂದುಹಾಕಿದರೆ, ಅಂಥವನು ಅಲ್ಲಿಗೆ ಓಡಿಹೋಗಲಿ. ಅವನಿಗೆ ರಕ್ತದ ಸೇಡು ತೀರಿಸುವವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರಲಿ.