Joshua 20:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಆಶ್ರಯನಗರಕ್ಕೆ ಓಡಿಹೋದವನು ಆ ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತು ಅಲ್ಲಿಯ ಜನನಾಯಕರಿಗೆ ನಡೆದ ಸಂಗತಿಯನ್ನು ತಿಳಿಸಲಿ. ಆಗ ನಾಯಕರು ಅವನಿಗೆ ನಗರವನ್ನು ಪ್ರವೇಶಿಸಲು ಅನುಮತಿ ಕೊಡಲಿ; ತಮ್ಮ ಜೊತೆಯಲ್ಲಿ ವಾಸಿಸಲು ಒಂದು ಸ್ಥಳವನ್ನು ಕೊಡಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂಥ ಪಟ್ಟಣಕ್ಕೆ ಓಡಿ ಹೋದವನು ಮೊದಲು ಊರ ಬಾಗಿಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಕ್ಕೆ ಸೇರಿಸಿಕೊಂಡು, ಅವನ ವಾಸಕ್ಕೆ ಸ್ಥಳ ಕೊಡಲಿ
Kannada BSI Bible 2016
ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತು ಆ ಪಟ್ಟಣದ ಹಿರಿಯರು ಕೇಳುವ ಹಾಗೆ ತನ್ನ ಮಾತುಗಳನ್ನು ಹೇಳುವಾಗ ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಂಡು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಂಥ ಪಟ್ಟಣಕ್ಕೆ ಓಡಿಹೋದವನು ಮೊದಲು ಊರಬಾಗಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಗೆ ಸೇರಿಸಿಕೊಂಡು ಅವನ ವಾಸಕ್ಕೆ ಸ್ಥಳಕೊಡಲಿ.
Kannada Bible (KNCL) BSI 2016
ಅಂಥ ನಗರಕ್ಕೆ ಓಡಿಹೋದವನು ಮೊದಲು ಊರಬಾಗಿಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಗೆ ಸೇರಿಸಿಕೊಳ್ಳಲಿ; ವಾಸಕ್ಕೆ ಸ್ಥಳಕೊಡಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು, ಪಟ್ಟಣದ ಬಾಗಿಲ ದ್ವಾರದಲ್ಲಿ ನಿಂತುಕೊಂಡು, ಆ ಪಟ್ಟಣದ ಹಿರಿಯರ ಮುಂದೆ ತನ್ನ ವ್ಯಾಜ್ಯವನ್ನು ತಿಳಿಸಬೇಕು. ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಳ್ಳಲಿ. ಅವರು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಲಿ.