Joshua 22:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಗೆಲಿಲೋತ್ ಎಂಬ ಸ್ಥಳಕ್ಕೆ ಹೋದರು. ಇದು ಕಾನಾನ್ ಪ್ರದೇಶದಲ್ಲಿ ಜೋರ್ಡನ್ ನದಿಯ ಹತ್ತಿರ ಇತ್ತು. ಆ ಸ್ಥಳದಲ್ಲಿ ಅವರು ಸುಂದರವಾದ ಒಂದು ಯಜ್ಞವೇದಿಕೆಯನ್ನು ಕಟ್ಟಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನ್ಯರೂ ಗಾದ್ಯರೂ ಹಾಗೂ ಮನಸ್ಸೆ ಕುಲದ ಅರ್ಧ ಜನರೂ ಕಾನಾನ್ ದೇಶದಲ್ಲಿರುವ ಯೊರ್ದನಿನ ತೀರಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ದೊಡ್ಡ ಯಜ್ಞವೇದಿಯನ್ನು ಕಟ್ಟಿದರು.
Kannada BSI Bible 2016
ಕಾನಾನ್ ದೇಶದಲ್ಲಿರುವ ಯೊರ್ದನಿನ ಪ್ರಾಂತ್ಯಕ್ಕೆ ಬಂದಾಗ ಅದರ ಬಳಿಯಲ್ಲಿ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರ ದವರೂ ನೋಟಕ್ಕೆ ದೊಡ್ಡದಾದ ಯಜ್ಞವೇದಿಯನ್ನು ಕಟ್ಟಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಕಾನಾನ್ ದೇಶದಲ್ಲಿರುವ ಯೊರ್ದನ್ ತೀರ ಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ಮಹಾವೇದಿಯನ್ನು ಕಟ್ಟಿದರು.
Kannada Bible (KNCL) BSI 2016
ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಕುಲದ ಅರ್ಧಜನರು ಕಾನಾನ್ ನಾಡಿನಲ್ಲಿರುವ ಜೋರ್ಡನ್ ತೀರಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ಮಹಾಬಲಿಪೀಠವನ್ನು ಕಟ್ಟಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರು ಕಾನಾನ್ ದೇಶದಲ್ಲಿರುವ ಯೊರ್ದನ್ ನದಿ ಪ್ರಾಂತಕ್ಕೆ ಬಂದಾಗ, ಅಲ್ಲಿ ದೊಡ್ಡ ಬಲಿಪೀಠವನ್ನು ಕಟ್ಟಿದರು.