Joshua 22:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇನ್ನೂ ಶೀಲೋವಿನಲ್ಲಿದ್ದ ಇಸ್ರೇಲಿನ ಉಳಿದ ಜನರು, ಈ ಮೂರು ಕುಲದವರು ಕಟ್ಟಿಸಿದ ಯಜ್ಞವೇದಿಕೆಯ ಬಗ್ಗೆ ಕೇಳಿದರು. ಕಾನಾನಿನ ಗಡಿಯ ಬಳಿಯಿರುವ ಗೆಲಿಲೋತ್ ಎಂಬಲ್ಲಿ ಇದನ್ನು ಕಟ್ಟಲಾಗಿದೆ ಎಂಬುದು ಅವರಿಗೆ ತಿಳಿಯಿತು. ಇದು ಇಸ್ರೇಲರಿಗೆ ಸೇರಿದ ಜೋರ್ಡನ್ ನದಿಯ ಸಮೀಪದಲ್ಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಜನರು ಇಸ್ರಾಯೇಲ ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್ ನದಿಯ ತೀರಪ್ರದೇಶದಲ್ಲಿ ಯಜ್ಞವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ಮಿಕ್ಕ ಇಸ್ರಾಯೇಲರಿಗೂ ತಿಳಿದಾಗ,
Kannada BSI Bible 2016
ಇಗೋ, ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧಗೋತ್ರದವರೂ ಕಾನಾನ್‌ ದೇಶಕ್ಕೆ ಎದುರಾಗಿ ಇಸ್ರಾಯೇಲ್‌ ಮಕ್ಕಳು ದಾಟಿ ಬಂದ ಯೊರ್ದನಿನ ಪ್ರಾಂತ್ಯದಲ್ಲಿ ಯಜ್ಞವೇದಿಯನ್ನು ಕಟ್ಟಿದರೆಂದು ಇಸ್ರಾಯೇಲ್‌ ಮಕ್ಕಳಿಗೂ ಕೇಳಿ ಬಂತು.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಇಸ್ರಾಯೇಲ್‍ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್‍ಹೊಳೆಯ ತೀರಪ್ರದೇಶದಲ್ಲಿ ವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ವಿುಕ್ಕ ಇಸ್ರಾಯೇಲ್ಯರಿಗೆ ಮುಟ್ಟಿದಾಗ
Kannada Bible (KNCL) BSI 2016
ರೂಬೇನ್ಯರು, ಗಾದ್ಯರು ಹಾಗು ಮನಸ್ಸೆಕುಲದ ಅರ್ಧಜನರು ಇಸ್ರಯೇಲ್ ನಾಡಾದ ಕಾನಾನಿನ ಪೂರ್ವಕ್ಕಿರುವ ಜೋರ್ಡನ್ ನದಿಯ ತೀರಪ್ರದೇಶದಲ್ಲಿ ಬಲಿಪೀಠವನ್ನು ಕಟ್ಟಿದ್ದಾರೆಂಬ ಸುದ್ದಿ ಮಿಕ್ಕ ಇಸ್ರಯೇಲರಿಗೆ ಮುಟ್ಟಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರೂ ಕಾನಾನ್ ದೇಶಕ್ಕೆ ಎದುರಾಗಿ ಇಸ್ರಾಯೇಲರು ದಾಟಿಬಂದ ಯೊರ್ದನ್ ನದಿ ಪ್ರಾಂತದಲ್ಲಿ ಬಲಿಪೀಠವನ್ನು ಕಟ್ಟಿದರೆಂಬ ಸುದ್ದಿ ಇಸ್ರಾಯೇಲರಿಗೆ ಮುಟ್ಟಿತು.