Joshua 22:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ನೀವು ಅದನ್ನೇ ಮಾಡುತ್ತಿದ್ದೀರಿ. ನೀವು ಯೆಹೋವನಿಗೆ ವಿಮುಖರಾಗುತ್ತಿದ್ದೀರಿ. ನೀವು ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ, ಪ್ರತಿಯೊಬ್ಬ ಇಸ್ರೇಲಿನವನ ಮೇಲೆಯೂ ಯೆಹೋವನು ಕೋಪಿಸಿಕೊಳ್ಳುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ನೀವು ಪುನಃ ಯೆಹೋವನನ್ನು ತಳ್ಳಿ ಬಿಡುತ್ತಿದ್ದೀರೋ? ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದರೆ, ನಾಳೆಯೇ ಯೆಹೋವನ ಕೋಪಾಗ್ನಿಯು ಇಸ್ರಾಯೇಲ್ ಸರ್ವಸಭೆಯ ಮೇಲೆ ಉರಿಯ ತೊಡಗುವುದು.
Kannada BSI Bible 2016
ಈಹೊತ್ತು ಕರ್ತನ ಕಡೆ ಯಿಂದ ತಿರಿಗಿ ಹೋಗುತ್ತೀರಲ್ಲಾ? ಈಹೊತ್ತು ಕರ್ತ ನಿಗೆ ವಿರೋಧವಾಗಿ ತಿರುಗಿ ಬಿದ್ದಾಗ ನಾಳೆ ಆತನು ಇಸ್ರಾಯೇಲ್‌ ಸಭೆಯಲ್ಲಾದರ ಮೇಲೆ ರೌದ್ರವುಳ್ಳವ ನಾಗುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಗ ನೀವು ತಿರಿಗಿ ಯೆಹೋವನನ್ನು ಬಿಡುತ್ತೀರೋ? ನೀವು ಈ ಹೊತ್ತು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದರೆ ನಾಳೆಯೇ ಆತನ ಕೋಪಾಗ್ನಿಯು ಇಸ್ರಾಯೇಲ್ ಸರ್ವಸಭೆಯ ಮೇಲೆ ಉರಿಯಹತ್ತುವದು.
Kannada Bible (KNCL) BSI 2016
ಇಂತಿರುವಲ್ಲಿ ನೀವು ಮತ್ತೆ ಸರ್ವೇಶ್ವರನನ್ನು ಬಿಟ್ಟುಬಿಡುತ್ತೀರೋ? ನೀವು ಇಂದು ಸರ್ವೇಶ್ವರನಿಗೆ ವಿರುದ್ಧ ತಿರುಗಿಬಿದ್ದರೆ ನಾಳೆಯೇ ಅವರ ಕೋಪಾಗ್ನಿ ಇಸ್ರಯೇಲ್ ಸರ್ವಸಭೆಯ ಮೇಲೆ ಉರಿಯತೊಡಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಈಗ ಯೆಹೋವ ದೇವರ ಕಡೆಯಿಂದ ತಿರುಗಿ ಹೋಗುತ್ತೀರಲ್ಲಾ? “ ‘ಈ ಹೊತ್ತು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬಿದ್ದರೆ, ನಾಳೆ ಅವರು ಇಸ್ರಾಯೇಲ್ ಜನಾಂಗದ ಮೇಲೆ ರೌದ್ರವುಳ್ಳವರಾಗುವರು.