Joshua 23:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಇಸ್ರೇಲರ ಶತ್ರುಗಳನ್ನು ಸದೆಬಡೆದು ಅವರಿಗೆ ವಿಶ್ರಾಂತಿಯನ್ನು ಕೊಟ್ಟನು. ಯೆಹೋವನು ಇಸ್ರೇಲನ್ನು ಸುರಕ್ಷಿತಗೊಳಿಸಿದನು. ಅನೇಕ ವರ್ಷಗಳು ಕಳೆದವು. ಯೆಹೋಶುವನು ಬಹಳ ಮುದುಕನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹು ದಿನಗಳಾದ ಮೇಲೆ ಯೆಹೋಶುವನು ದಿನತುಂಬಿದ ಮುದುಕನಾದನು.
Kannada BSI Bible 2016
ಕರ್ತನು ಇಸ್ರಾಯೇಲನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ ವಿಶ್ರಾಂತಿ ಕೊಟ್ಟ ಬಹಳ ದಿನಗಳ ತರುವಾಯ ಯೆಹೋಶುವನ ದಿನಗಳು ತುಂಬಿ ವೃದ್ಧನಾದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಸುತ್ತಣ ವಿರೋಧಿಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹುದಿನಗಳು ಗತಿಸಿದ ಮೇಲೆ
Kannada Bible (KNCL) BSI 2016
ಸರ್ವೇಶ್ವರಸ್ವಾಮಿ ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಯೇಲರಿಗೆ ನೆಮ್ಮದಿಯಿತ್ತರು. ಬಹಳ ದಿನಗಳಾದ ತರುವಾಯ ಯೆಹೋಶುವ ಹಣ್ಣುಹಣ್ಣು ಮುದುಕನಾದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.