Joshua 24:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಕ್ಕೆ ಯೆಹೋಶುವನು, “ನೀವು ನಿಮ್ಮನ್ನೂ ನಿಮ್ಮ ಸುತ್ತಲಿರುವ ಜನರನ್ನೂ ನೋಡಿರಿ. ನೀವು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೀರಿ ಎಂಬುದು ನಿಮ್ಮೆಲ್ಲರಿಗೆ ಗೊತ್ತು ಮತ್ತು ಅದಕ್ಕೆ ನೀವು ಒಪ್ಪಿದ್ದೀರಿ. ನೀವೆಲ್ಲರೂ ಇದಕ್ಕೆ ಸಾಕ್ಷಿಯಾಗಿರುವಿರಾ?” ಎಂದು ಕೇಳಿದನು. ಜನರು, “ಹೌದು, ಇದು ನಿಜ! ನಾವೆಲ್ಲರು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೇವೆ” ಎಂದು ಉತ್ತರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋಶುವನು ಅವರಿಗೆ, “ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು ಅನ್ನಲು ಅವರು ಹೌದು ನಾವೇ ಸಾಕ್ಷಿಗಳು” ಎಂದರು
Kannada BSI Bible 2016
ಯೆಹೋಶುವನು ಜನರಿಗೆ--ನೀವು ಕರ್ತನನ್ನು ಸೇವಿಸುವದಕ್ಕೆ ಆತನನ್ನು ಆದು ಕೊಂಡಿರು ವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಅವರಿಗೆ - ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವದಕ್ಕೆ ನೀವೇ ಸಾಕ್ಷಿಗಳು ಎನ್ನಲು ಅವರು - ಹೌದು, ನಾವೇ ಸಾಕ್ಷಿಗಳು ಅಂದರು.
Kannada Bible (KNCL) BSI 2016
ಯೆಹೋಶುವ ಅವರಿಗೆ, “ನೀವು ಸರ್ವೇಶ್ವರನಿಗೇ ಸೇವೆಸಲ್ಲಿಸುವುದನ್ನು ಆರಿಸಿಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು,” ಎನ್ನಲು ಅವರು, “ಹೌದು, ನಾವೇ ಸಾಕ್ಷಿಗಳು,” ಎಂದು ಉತ್ತರಕೊಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಯೆಹೋಶುವನು ಜನರಿಗೆ, “ನೀವು ಯೆಹೋವ ದೇವರನ್ನು ಸೇವಿಸುವುದಕ್ಕೆ ಅವರನ್ನು ಆಯ್ದುಕೊಂಡಿರುವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ,” ಎಂದನು. ಅದಕ್ಕವರು, “ಹೌದು, ನಾವೇ ಸಾಕ್ಷಿಗಳಾಗಿದ್ದೇವೆ,” ಎಂದರು.