Joshua 24:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದಾದ ಮೇಲೆ ನೂನನ ಮಗನಾದ ಯೆಹೋಶುವನು ಮರಣ ಹೊಂದಿದನು. ಯೆಹೋಶುವನು ನೂರಹತ್ತು ವರ್ಷ ಬದುಕಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಾದ ಮೇಲೆ ಯೆಹೋವನ ಸೇವಕನಾದ ನೂನನ ಮಗನಾದ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದನು.
Kannada BSI Bible 2016
ಇವುಗಳಾದ ತರುವಾಯ ನೂನನ ಮಗನಾದ ಯೆಹೋಶುವನೆಂಬ ಕರ್ತನ ಸೇವಕನು ನೂರ ಹತ್ತು ವರುಷ ವಯಸ್ಸಿನವನಾಗಿ ಸತ್ತನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಾದ ಮೇಲೆ ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರ ಹತ್ತು ವರುಷದವನಾಗಿ ಮರಣ ಹೊಂದಿದನು.
Kannada Bible (KNCL) BSI 2016
ಇದಾದ ಮೇಲೆ ಸರ್ವೇಶ್ವರನ ದಾಸನಾದ ನೂನನ ಮಗ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವುಗಳಾದ ತರುವಾಯ ನೂನನ ಮಗ ಯೆಹೋಶುವನೆಂಬ ಯೆಹೋವ ದೇವರ ಸೇವಕನು ನೂರಹತ್ತು ವರುಷ ವಯಸ್ಸಿನವನಾಗಿ ಮರಣಹೊಂದಿದನು.