Joshua 3:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮಗೂ ಒಡಂಬಡಿಕೆಯ ಪೆಟ್ಟಿಗೆಗೂ ಮೂರು ಸಾವಿರ ಅಡಿ ಅಂತರವಿರಲಿ. ಅದರ ಸಮೀಪ ನೀವು ಹೋಗಕೂಡದು. ಈ ದಾರಿಯಲ್ಲಿ ನೀವು ಹಿಂದೆಂದೂ ಪ್ರಯಾಣ ಮಾಡಿಲ್ಲ. ಆದರೆ ನೀವು ಅವರನ್ನು ಹಿಂಬಾಲಿಸಿದರೆ ಎಲ್ಲಿಗೆ ಹೋಗಬೇಕೆಂದು ನಿಮಗೆ ತಿಳಿಯುತ್ತದೆ” ಎಂದು ಸಾರಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ನಿಮಗೂ ಮಂಜೂಷಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರವಿರಬೇಕು; ಹತ್ತಿರ ಹೋಗಬಾರದು. ಹೀಗೆ ನೀವು ಹೋಗಬೇಕಾದ ಮಾರ್ಗವು ನಿಮಗೆ ಗೊತ್ತಾಗುವುದು; ಏಕೆಂದರೆ ನೀವು ಆ ಮಾರ್ಗವಾಗಿ ಇಲ್ಲಿಯವರೆಗೆ ಪ್ರಯಾಣ ಮಾಡಿರುವುದಿಲ್ಲ” ಅಂದರು.
Kannada BSI Bible 2016
ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ದೂರ ಇರಬೇಕು. ನೀವು ಹೋಗುವ ಮಾರ್ಗವನ್ನು ತಿಳಿಯುವ ಹಾಗೆ ಅದರ ಹತ್ತಿರ ಬರಬೇಡಿರಿ. ನೀವು ಎಂದಾದರೂ ಆ ಮಾರ್ಗದಲ್ಲಿ ದಾಟಿ ಹೋಗಿರು ವದಿಲ್ಲ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ನಿಮಗೂ ಮಂಜೂಷಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರವಿರಬೇಕು; ಹತ್ತಿರ ಹೋಗಬಾರದು. ಹೀಗೆ ನೀವು ಹೋಗತಕ್ಕ ಮಾರ್ಗವು ನಿಮಗೆ ಗೊತ್ತಾಗುವದು; ಆ ಮಾರ್ಗದಲ್ಲಿ ನೀವು ಮುಂಚೆ ಬರಲಿಲ್ಲವಲ್ಲಾ ಅಂದರು.
Kannada Bible (KNCL) BSI 2016
ಆದರೆ ಅದರ ಹತ್ತಿರ ನೀವು ಹೋಗಬಾರದು. ನಿಮಗೂ ಮಂಜೂಷಕ್ಕೂ ಸುಮಾರು ಒಂದು ಕಿಲೋಮೀಟರ್ ಅಂತರವಿರಬೇಕು. ಹೀಗೆ ನೀವು ಹೋಗಬೇಕಾದ ಮಾರ್ಗ ನಿಮಗೆ ಗೊತ್ತಾಗುವುದು. ಏಕೆಂದರೆ ನೀವು ಆ ಮಾರ್ಗವಾಗಿ ಇಲ್ಲಿಯವರೆಗೆ ಪ್ರಯಾಣ ಮಾಡಿದ್ದಿಲ್ಲ,” ಎಂದು ತಿಳಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರ ಇರಬೇಕು. ಅದರ ಹತ್ತಿರ ಬರಬೇಡಿರಿ. ನೀವು ಹೋಗಬೇಕಾದ ಮಾರ್ಗ ನಿಮಗೆ ತಿಳಿಯುವುದು. ಏಕೆಂದರೆ ನೀವು ಆ ಮಾರ್ಗವಾಗಿ ಇದುವರೆಗೆ ಪ್ರಯಾಣ ಮಾಡಿರುವುದಿಲ್ಲ,” ಎಂದರು.