Joshua 4:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಾಜಕರು ಯೆಹೋಶುವನ ಆಜ್ಞೆಯಂತೆ ಪವಿತ್ರ ಪೆಟ್ಟಿಗೆಯನ್ನು ತಮ್ಮ ಸಂಗಡ ತೆಗೆದುಕೊಂಡು ನದಿಯಿಂದ ಹೊರಗಡೆ ಬಂದರು. ಯಾಜಕರ ಪಾದಗಳು ನದಿಯ ಆಚೆದಡದ ನೆಲವನ್ನು ಮುಟ್ಟಿದ ಕೂಡಲೇ ನದಿಯ ನೀರು ಮತ್ತೆ ಹರಿಯುವುದಕ್ಕೆ ಆರಂಭಿಸಿತು. ಜನರು ದಾಟುವುದಕ್ಕಿಂತ ಮುಂಚೆ ಹರಿಯುತ್ತಿದ್ದಂತೆ ನೀರು ಮತ್ತೆ ದಡಮೀರಿ ಹರಿಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೇ ನೀರು ಮೊದಲಿನಂತೆ ಬಂದು, ಯೊರ್ದನ್ ನದಿಯು ದಡಮೀರಿ ಹರಿಯಿತು.
Kannada BSI Bible 2016
ಆಗ ಆದದ್ದೇನಂದರೆ, ಕರ್ತನ ಒಡಂಬಡಿಕೆಯ ಮಂಜೂಷ ವನ್ನು ಹೊರುವ ಯಾಜಕರು ಯೊರ್ದನಿನ ಮಧ್ಯ ದಲ್ಲಿಂದ ತಮ್ಮ ಪಾದಗಳನ್ನು ಒಣಗಿದ ಭೂಮಿಗೆ ಇಟ್ಟಾಗ ಯೊರ್ದನಿನ ನೀರು ತಿರಿಗಿ ಮೊದಲಿನ ಹಾಗೆಯೇ ದಡಗಳ ಮೇಲೆಲ್ಲಾ ಹರಿಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೆ ನೀರು ಮುಂಚಿನಂತೆ ಬಂದು ಯೊರ್ದನ್ ಹೊಳೆಯು ದಡಮೀರಿ ಹರಿಯಹತ್ತಿತು.
Kannada Bible (KNCL) BSI 2016
ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನಿಂದ ಮೇಲೆ ಬಂದು ಒಣನೆಲದಲ್ಲಿ ಕಾಲಿಟ್ಟ ಕೂಡಲೇ ನೀರು ಮುಂಚಿನಂತೆ ಬಂದು ಜೋರ್ಡನ್ ನದಿಯ ದಡಮೀರಿ ಹರಿಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿ ಮಧ್ಯದಲ್ಲಿಂದ ಏರಿ, ತಮ್ಮ ಅಂಗಾಲುಗಳನ್ನು ಒಣನೆಲದ ಮೇಲೆ ಇಟ್ಟಕೂಡಲೇ ನೀರು ಮುಂಚಿನಂತೆ ಬಂದು ಯೊರ್ದನ್ ನದಿಯ ದಡ ತುಂಬಿ ಹರಿಯಿತು.