Joshua 6:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ನಗರದಲ್ಲಿದ್ದ ಎಲ್ಲವನ್ನು ನಾಶಪಡಿಸಿದರು; ಅಲ್ಲಿದ್ದ ತರುಣರನ್ನು, ವೃದ್ಧರನ್ನು, ತರುಣಿಯರನ್ನು, ವೃದ್ಧೆಯರನ್ನು, ದನಕರುಗಳನ್ನು, ಕುರಿಗಳನ್ನು ಮತ್ತು ಕತ್ತೆಗಳನ್ನು ಕೊಂದುಹಾಕಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಟ್ಟಣದಲ್ಲಿದ್ದ ಗಂಡಸರನ್ನೂ, ಹೆಂಗಸರನ್ನೂ, ಹುಡುಗರನ್ನೂ, ಮುದುಕರನ್ನೂ, ದನ, ಕುರಿ ಕತ್ತೆಗಳನ್ನೂ ಸಂಪೂರ್ಣವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
Kannada BSI Bible 2016
ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀ ಪುರುಷ ರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆ ಗಳನ್ನೂ ಕತ್ತಿಯ ಬಾಯಿಂದ ಸಂಪೂರ್ಣವಾಗಿ ನಾಶ ಮಾಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಪಟ್ಟಣದಲ್ಲಿದ್ದ ಗಂಡಸರನ್ನೂ ಹೆಂಗಸರನ್ನೂ ಹುಡುಗರನ್ನೂ ಮುದುಕರನ್ನೂ ದನಕುರಿಕತ್ತೆಗಳನ್ನೂ ನಿಶ್ಶೇಷವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
Kannada Bible (KNCL) BSI 2016
ಅಲ್ಲಿದ್ದ ಗಂಡಸರು, ಹೆಂಗಸರು, ಯುವಕರು, ಮುದುಕರು, ದನ ಕುರಿ, ಕತ್ತೆ ಇವುಗಳನ್ನೆಲ್ಲಾ ನಿಶ್ಯೇಷವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀಪುರುಷರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆಗಳನ್ನೂ ಖಡ್ಗದಿಂದ ಸಂಪೂರ್ಣವಾಗಿ ನಾಶಮಾಡಿದರು.