Joshua 6:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತು ಅವನು ಜನರಿಗೆ “ನೀವು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ” ಎಂದು ಹೇಳಿದನು.
Kannada BSI Bible 2016
ಜನರಿಗೆ--ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ; ಯುದ್ಧಸನ್ನದ್ಧರು ಕರ್ತನ ಮಂಜೂಷದ ಮುಂದೆ ಹೋಗಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಅವನು ಜನರಿಗೆ - ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ ಎಂದು ಹೇಳಿದನು.
Kannada Bible (KNCL) BSI 2016
ಅಂತೆಯೆ ಜನರಿಗೆ, “ನೀವು ಮುಂದೆ ಹೋಗಿ ನಗರವನ್ನು ಸುತ್ತುವರೆಯಿರಿ. ಯುದ್ಧಸನ್ನದ್ಧರೆಲ್ಲರೂ ಸರ್ವೇಶ್ವರನ ಮಂಜೂಷದ ಮುಂದೆ ಹೋಗಲಿ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನರಿಗೆ, “ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ದರು ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.