Joshua 7:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ ‘ಆಕೋರ್ ಕಣಿವೆ’ ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ರಾಶಿಯು ನಿರ್ಮಾಣವಾಯಿತು. ಅದು ಇಂದಿನ ವರೆಗೂ ಇದೆ. ಆಗ ಯೆಹೋವನ ಕೋಪಾಗ್ನಿ ತಣ್ಣಗಾಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.
Kannada BSI Bible 2016
ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಅದು ಇಂದಿನವರೆಗೂ ಅದೆ. ಆಗ ಯೆಹೋವನ ರೋಷಾಗ್ನಿಯು ಅಡಗಿಹೋಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.
Kannada Bible (KNCL) BSI 2016
ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಗುಡ್ಡೆಯನ್ನು ಹಾಕಿದರು. ಅದು ಇಂದಿನವರೆಗೂ ಇದೆ. ಬಳಿಕ ಸರ್ವೇಶ್ವರನ ಕೋಪಾಗ್ನಿ ತಣ್ಣಗಾಯಿತು. ಈ ಘಟನೆಯಿಂದಾಗಿ ಆ ಸ್ಥಳಕ್ಕೆ ‘ಆಕೋರಿನ ಕಣಿವೆ’ ಎಂಬ ಹೆಸರು ಬಂದಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಮೇಲೆ ಕಲ್ಲುಕುಪ್ಪೆ ಕೂಡಿಸಿದರು. ಅದು ಈ ದಿನದವರೆಗೂ ಇದೆ. ಆಗ ಯೆಹೋವ ದೇವರು ತಮ್ಮ ಕೋಪದ ಉರಿಯನ್ನು ಬಿಟ್ಟು ತಿರುಗಿದರು. ಆದ್ದರಿಂದ ಆ ಸ್ಥಳವು ಈವರೆಗೂ ಆಕೋರಿನ ಕಣಿವೆ ಎಂದು ಕರೆಯಲಾಗುತ್ತದೆ.