Joshua 7:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸುಮಾರು ಮೂರು ಸಾವಿರ ಜನರು ‘ಆಯಿ’ಗೆ ಹೋದರು. ಆದರೆ ‘ಆಯಿ’ಯ ಜನರು ಇಸ್ರೇಲಿನ ಸುಮಾರು ಮೂವತ್ತಾರು ಜನರನ್ನು ಕೊಂದು ಹಾಕಿದರು. ಆದ್ದರಿಂದ ಇಸ್ರೇಲಿನ ಜನರು ಓಡಿಹೋದರು. ‘ಆಯಿ’ಯ ಜನರು ಅವರನ್ನು ಪಟ್ಟಣದ ದ್ವಾರದಿಂದ ಕಲ್ಲುಗಣಿಗಳವರೆಗೆ ಬೆನ್ನಟ್ಟಿಕೊಂಡು ಬಂದರು. ‘ಆಯಿ’ಯ ಜನರು ಅವರನ್ನು ಚೆನ್ನಾಗಿ ಥಳಿಸಿದರು. ಆಗ ಇಸ್ರೇಲರು ತುಂಬ ಭಯಗೊಂಡು ಧೈರ್ಯವನ್ನು ಕಳೆದುಕೊಂಡರು. (Verses 4-5)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರಂತೆ ಸುಮಾರು ಮೂರು ಸಾವಿರ ಮಂದಿ ಯುದ್ಧಕ್ಕೆ ಹೋದರು. ಆದರೆ ಅವರು ಆಯಿ ಊರಿನವರ ಎದುರಿನಿಂದ ಓಡಿ ಹೋಗಬೇಕಾಯಿತು.
Kannada BSI Bible 2016
ಹಾಗೆಯೇ ಜನರಲ್ಲಿ ಹೆಚ್ಚು ಕಡಿಮೆ ಮೂರುಸಾವಿರ ಮಂದಿ ಅಲ್ಲಿಗೆ ಹೋದರು; ಆದರೆ ಅವರು ಆಯಿಯ ಮನುಷ್ಯರ ಮುಂದೆ ಓಡಿಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರಂತೆ ಸುಮಾರು ಮೂರು ಸಾವಿರ ಮಂದಿ ಹೋದರು. ಆದರೆ ಅವರು ಆಯಿ ಎಂಬ ಊರಿನವರ ಎದುರಿನಿಂದ ಓಡಿ ಬರಬೇಕಾಯಿತು.
Kannada Bible (KNCL) BSI 2016
ಅದರಂತೆಯೇ ಸುಮಾರು ಮೂರುಸಾವಿರ ಮಂದಿ ಹೋದರು. ಆದರೆ ಅವರು ಆಯಿ ಎಂಬ ಊರಿನವರನ್ನು ಎದುರಿಸಲಾಗದೆ ಓಡಿಬರಬೇಕಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಜನರಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಅಲ್ಲಿಗೆ ಹೋದರು. ಆದರೆ ಅವರು ಆಯಿ ಎಂಬ ಪಟ್ಟಣದ ಮನುಷ್ಯರನ್ನು ಎದುರಿಸಲಾಗದೆ ಓಡಿಹೋದರು.