Joshua 8:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋಶುವನು ‘ಆಯಿ’ಯ ಅರಸನನ್ನು ಒಂದು ಮರಕ್ಕೆ ಸಾಯಂಕಾಲದವರೆಗೂ ನೇತುಹಾಕಿದನು. ಸೂರ್ಯನು ಮುಳುಗಿದ ಮೇಲೆ, ಯೆಹೋಶುವನು ಆ ಅರಸನ ಶವವನ್ನು ಮರದಿಂದ ಕೆಳಗಿಳಿಸಿ ನಗರದ ದ್ವಾರದಲ್ಲೇ ಬಿಸಾಡಿ ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಯಿ ಊರಿನ ಅರಸನನ್ನು ಸಾಯಂಕಾಲದವರೆಗೂ ಮರಕ್ಕೆ ನೇತು ಹಾಕಿಸಿ ಸೂರ್ಯನು ಅಸ್ತಮಿಸುವಾಗ ಯೆಹೋಶುವನು ಅವನ ಶವವನ್ನು ಕೆಳಗಿಳಿಸಿ ಅದನ್ನು ಊರಬಾಗಿಲಲ್ಲಿ ಹಾಕಿಸಿ ಅದರ ಮೇಲೆ ಕಲ್ಲಿನ ದೊಡ್ಡ ರಾಶಿಯನ್ನು ಹಾಕಿಸಿದನು. ಅದು ಇಂದಿನ ವರೆಗೂ ಹಾಗೆಯೇ ಇದೆ.
Kannada BSI Bible 2016
ಆಯಿಯ ಅರಸನನ್ನು ಸಾಯಂಕಾಲದ ವರೆಗೂ ಒಂದು ಮರದಲ್ಲಿ ತೂಗ ಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶು ವನು ಅವನ ಹೆಣವನ್ನು ಮರದಿಂದ ಇಳಿಸಿ ಅದನ್ನು ಆ ಪಟ್ಟಣದ ಬಾಗಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿ ಈ ವರೆಗೆ ಇರುವ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಯಿ ಎಂಬ ಊರಿನ ಅರಸನನ್ನು ಸಾಯಂಕಾಲದವರೆಗೂ ಮರದಲ್ಲಿ ನೇತುಹಾಕಿಸಿ ಸೂರ್ಯನು ಅಸ್ತವಿುಸುತ್ತಲೇ ಅವನ ಶವವನ್ನು ಕೆಳಗಿಳಿಸಿ ಅದನ್ನು ಊರು ಬಾಗಲಲ್ಲಿ ಹಾಕಿಸಿಬಿಟ್ಟು ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
Kannada Bible (KNCL) BSI 2016
ಆಯಿಯ ಅರಸನನ್ನು ಸಂಜೆಯವರೆಗೂ ಮರಕ್ಕೆ ನೇತುಹಾಕಿಸಿದನು. ಸೂರ್ಯನು ಅಸ್ತಮಿಸುತ್ತಲೆ ಅವನ ಶವವನ್ನು ಕೆಳಗಿಳಿಸಿ ಅದನ್ನು ಊರಬಾಗಿಲಿನಲ್ಲಿ ಹಾಕಿಸಿ ಅದರ ಮೇಲೆ ಕಲ್ಲಿನ ದೊಡ್ಡ ರಾಶಿಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಯಿ ಎಂಬ ಪಟ್ಟಣದ ಅರಸನನ್ನು ಸಾಯಂಕಾಲದವರೆಗೂ ಒಂದು ಮರದಲ್ಲಿ ತೂಗಿಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶುವನು ಅವನ ಹೆಣವನ್ನು ಮರದಿಂದ ಇಳಿಸಿ, ಅದನ್ನು ಆ ಪಟ್ಟಣದ ಬಾಗಿಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿದರು. ಆ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಇಟ್ಟರು. ಅದು ಇಂದಿನವರೆಗೂ ಇದೆ.