Joshua 8:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋಶುವನು “ಆಯಿ”ಯ ಮೇಲೆ ಆಕ್ರಮಣಮಾಡಲು ಸೈನ್ಯಸಮೇತವಾಗಿ ಹೋದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂತೆಯೇ ಯೆಹೋಶುವನು ಎದ್ದು ಭಟರೆಲ್ಲರ ಸಹಿತವಾಗಿ ಆಯಿಗೆ ಹೋಗುವುದಕ್ಕೋಸ್ಕರ ಸಿದ್ಧನಾಗಿ ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿ ಅವರಿಗೆ
Kannada BSI Bible 2016
ಆಗ ಆಯಿಗೆ ಏರಿ ಹೋಗಲು ಯೆಹೋಶುವನೂ ಸಮಸ್ತ ಯುದ್ಧಸ್ಥರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಕೊಳ್ಳೆಯನ್ನೂ ಪಶುಗಳನ್ನೂ ನಿಮಗೋಸ್ಕರ ತೆಗೆದುಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಆ ಊರಿನ ಹಿಂದುಗಡೆಯಲ್ಲಿ ಹೊಂಚುಹಾಕಿಕೊಂಡಿರಲಿ ಎಂದು ಆಜ್ಞಾಪಿಸಲು ಅವನು ಎದ್ದು ಭಟರೆಲ್ಲರ ಸಹಿತವಾಗಿ ಆಯಿಗೆ ಹೋಗುವದಕ್ಕೋಸ್ಕರ ಸಿದ್ಧನಾಗಿ
Kannada Bible (KNCL) BSI 2016
ಅಂತೆಯೇ ಯೆಹೋಶುವನು ಯೋಧರೆಲ್ಲರ ಸಹಿತವಾಗಿ ಆಯಿಗೆ ಹೊರಡಲು ಸಿದ್ಧನಾದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗಲು ಯೆಹೋಶುವನೂ, ಸಮಸ್ತ ಸೈನಿಕರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆಯ್ದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು.