Joshua 8:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹೊಂಚುಹಾಕುವುದಕ್ಕೆ ಹೊರಟುಹೋಗಿ ಬೇತೇಲಿಗೂ ಆಯಿಗೂ ನಡುವೆ ಆಯಿ ಎಂಬ ಊರಿನ ಪಶ್ಚಿಮದಲ್ಲಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯನ್ನು ಜನರ ಮಧ್ಯದಲ್ಲಿ ಕಳೆದನು.
Kannada BSI Bible 2016
ಯೆಹೋ ಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿಗೂ ನಡುವೆ ಆಯಿಗೆ ಪಶ್ಚಿಮದ ಕಡೆ ಇಳುಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಇಳುಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಹೊಂಚುಹಾಕುವದಕ್ಕೆ ಹೊರಟುಹೋಗಿ ಬೇತೇಲಿಗೂ ಆಯಿಗೂ ನಡುವೆ ಆಯಿ ಎಂಬ ಊರಿನ ಪಶ್ಚಿಮದಲ್ಲಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯನ್ನು ಜನರ ಮಧ್ಯದಲ್ಲಿ ಕಳೆದನು.
Kannada Bible (KNCL) BSI 2016
ಅವರು ಹೊಂಚುಹಾಕುವ ಸಲುವಾಗಿ ಬೇತೇಲಿಗೂ ಆಯಿಗೂ ನಡುವೆ ಆಯಿಯ ಪಶ್ಚಿಮಕ್ಕೆ ಹೋಗಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯಲ್ಲಿ ಜನರ ಮಧ್ಯೆ ಕಳೆದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿ ಎಂಬ ಪಟ್ಟಣಕ್ಕೂ ನಡುವೆ ಆಯಿ ಎಂಬ ಪಟ್ಟಣಕ್ಕೆ ಪಶ್ಚಿಮದ ಕಡೆ ಅಡಗಿಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಉಳಿದನು.