Judges 1:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ತರುವಾಯ ಯೆಹೂದ್ಯರು ಕಿರ್ಯತರ್ಬವೆಂಬ ಹೆಬ್ರೋನ್ ನಗರದಲ್ಲಿದ್ದ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಯೆಹೂದ್ಯರು ಶೇಷೈ, ಅಹೀಮನ್ ಮತ್ತು ತಲ್ಮೈ ಎಂಬವರನ್ನು ಸೋಲಿಸಿಬಿಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಮೊದಲು ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ಬಿದ್ದು, ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬುವರನ್ನು ಸೋಲಿಸಿದರು.
Kannada BSI Bible 2016
ಯೂದನು ಪೂರ್ವದಲ್ಲಿ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್‌, ತಲ್ಮೈರನ್ನು ಕೊಂದುಹಾಕಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಮುಂಚೆ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ಬಿದ್ದು ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬವರನ್ನು ಹೊಡೆದು ಬಿಟ್ಟರು.
Kannada Bible (KNCL) BSI 2016
‘ಕಿರ್ಯತರ್ಬ’ ಎಂದು ಈ ಮುಂದೆ ಹೆಸರುಗೊಂಡಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ದಾಳಿಮಾಡಿ ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬವರನ್ನು ಸೋಲಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೂದ ಗೋತ್ರದವರು ಪೂರ್ವದಲ್ಲಿ ಕಿರ್ಯತ್ ಅರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಸೋಲಿಸಿದರು.