Judges 1:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕಾಲೇಬನಿಗೆ ಕೆನಜನೆಂಬ ತಮ್ಮನಿದ್ದನು. ಕೆನಜನಿಗೆ ಒತ್ನೀಯೇಲನೆಂಬ ಮಗನಿದ್ದನು. ಒತ್ನೀಯೇಲನು ಕಿರ್ಯತ್‌ಸೇಫೆರನ್ನು ಗೆದ್ದುಕೊಂಡನು. ಅದಕ್ಕಾಗಿ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನ ಜೊತೆ ಮದುವೆ ಮಾಡಿಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ತಮ್ಮನೂ, ಕೆನಜನ ಮಗನೂ ಆದ ಒತ್ನೀಯೇಲನು ಕಿರ್ಯತ್ ಸೇಫೆರನ್ನು ವಶಪಡಿಸಿಕೊಂಡನು. ಆಗ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿಕೊಟ್ಟನು.
Kannada BSI Bible 2016
ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಆಗ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಅವನಿಗೆ ಮದುವೆಮಾಡಿಕೊಟ್ಟನು.
Kannada Bible (KNCL) BSI 2016
ಅಂತೆಯೇ ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದುಕೊಂಡಾಗ ಕಾಲೇಬನು ತನ್ನ ಮಗಳು ಅಕ್ಷಾ ಎಂಬಾಕೆಯನ್ನು ಆತನಿಗೆ ಮದುವೆಮಾಡಿಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.