Judges 1:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬೆನ್ಯಾಮೀನನ ಕುಲದವರಿಗೆ ಯೆಬೂಸಿಯರನ್ನು ಜೆರುಸಲೇಮಿನಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿನವರೆಗೂ ಅವರು ಬೆನ್ಯಾಮೀನರೊಡನೆ ಜೆರುಸಲೇಮಿನಲ್ಲಿಯೇ ವಾಸವಾಗಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರೂಸಲೇಮಿನಲ್ಲಿದ್ದ ಯೆಬೂಸಿಯರನ್ನು ಬೆನ್ಯಾಮೀನ್ಯರು ಹೊರಡಿಸಿಬಿಡಲಿಲ್ಲ. ಅವರು ಇಂದಿನವರೆಗೂ ಬೆನ್ಯಾಮೀನ್ಯರ ಸಂಗಡ ಯೆರೂಸಲೇಮಿನಲ್ಲಿಯೇ ವಾಸವಾಗಿದ್ದಾರೆ.
Kannada BSI Bible 2016
ಬೆನ್ಯಾವಿಾನನ ಮಕ್ಕಳು ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲಿಲ್ಲ. ಆದರೆ ಯೆಬೂಸಿಯರು ಈ ದಿನದ ವರೆಗೆ ಬೆನ್ಯಾವಿಾ ನನ ಮಕ್ಕಳ ಸಂಗಡ ವಾಸವಾಗಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರೂಸಲೇವಿುನಲ್ಲಿದ್ದ ಯೆಬೂಸಿಯರನ್ನು ಹೊರಡಿಸುವದು ಬೆನ್ಯಾಮೀನ್ಯರಿಂದ ಆಗದೆ ಹೋಯಿತು. ಅವರು ಇಂದಿನವರೆಗೂ ಬೆನ್ಯಾಮೀನ್ಯರ ಸಂಗಡ ಯೆರೂಸಲೇವಿುನಲ್ಲಿಯೇ ವಾಸವಾಗಿದ್ದಾರೆ.
Kannada Bible (KNCL) BSI 2016
ಜೆರುಸಲೇಮಿನಲ್ಲಿದ್ದ ಯೆಬೂಸಿಯರನ್ನು ಹೊರಡಿಸಲು ಬೆನ್ಯಾಮೀನ್ಯರಿಂದ ಆಗದೆಹೋಯಿತು. ಅವರು ಇಂದಿನವರೆಗೂ, ಬೆನ್ಯಾಮೀನ್ಯರ ಸಂಗಡ ಜೆರುಸಲೇಮಿನಲ್ಲೇ ವಾಸವಾಗಿ ಇದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆನ್ಯಾಮೀನ್ಯರಿಗೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಯೆಬೂಸಿಯರು ಈ ದಿನದವರೆಗೂ ಬೆನ್ಯಾಮೀನರ ಸಂಗಡ ವಾಸವಾಗಿದ್ದಾರೆ.