Judges 1:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಗೂಢಚಾರರಿಗೆ ಗುಪ್ತಮಾರ್ಗವನ್ನು ತೋರಿಸಿದನು. ಯೋಸೇಫನ ಕುಲದವರು ಬೇತೇಲ್ ನಿವಾಸಿಗಳನ್ನು ತಮ್ಮ ಖಡ್ಗಗಳಿಂದ ಸಂಹರಿಸಿದರು. ಆದರೆ ಅವರು ತಮಗೆ ಸಹಾಯ ಮಾಡಿದ ಆ ಮನುಷ್ಯನನ್ನೂ ಅವನ ಕುಟುಂಬದವರನ್ನೂ ಕೊಲ್ಲದೆ ಕಳುಹಿಸಿಬಿಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವರು ಆ ಪಟ್ಟಣವನ್ನು ಕತ್ತಿಯಿಂದ ಸಂಹರಿಸಿದರು. ಆದರೆ ಆ ಮನುಷ್ಯನನ್ನೂ ಅವನ ಕುಟುಂಬವನ್ನೂ ಏನು ಮಾಡದೆ ಕಳುಹಿಸಿಬಿಟ್ಟರು.
Kannada BSI Bible 2016
ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ ಅವರು ಬಂದು ಪಟ್ಟಣವನ್ನು ಕತ್ತಿಯಿಂದ ಹೊಡೆದು ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವರು ಆ ಪಟ್ಟಣವನ್ನು ಕತ್ತಿಯಿಂದ ಸಂಹರಿಸಿದರು. ಆದರೆ ಆ ಮನುಷ್ಯನನ್ನೂ ಅವನ ಕುಟುಂಬವನ್ನೂ ಕಳುಹಿಸಿಬಿಟ್ಟರು.
Kannada Bible (KNCL) BSI 2016
ಹೀಗೆ ಅವರು ಆ ಪಟ್ಟಣವನ್ನು ಕತ್ತಿಗೆ ತುತ್ತಾಗಿಸಿದರು. ಆದರೆ ಆ ವ್ಯಕ್ತಿಯನ್ನು ಮತ್ತು ಅವನ ಕುಟುಂಬದವರನ್ನು ಕಳುಹಿಸಿಬಿಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ, ಅವರು ಬಂದು ಪಟ್ಟಣವನ್ನು ಖಡ್ಗದಿಂದ ಹೊಡೆದು, ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.