Judges 1:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಎಫ್ರಾಯೀಮ್ ಕುಲದವರಿಗೂ ಹೀಗೆಯೇ ಆಯಿತು. ಕಾನಾನ್ಯರು ಗೆಜೆರಿನಲ್ಲಿ ವಾಸಮಾಡಿಕೊಂಡಿದ್ದರು. ಎಫ್ರಾಯೀಮ್ ಜನರಿಂದ ಕಾನಾನ್ಯರೆಲ್ಲರೂ ತಮ್ಮ ಪ್ರದೇಶವನ್ನು ಬಿಟ್ಟುಹೋಗುವಂತೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ಗೆಜೆರಿನಲ್ಲಿ ಎಫ್ರಾಯೀಮ್ಯರೊಂದಿಗೆ ನೆಲೆಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಫ್ರಾಯೀಮ್ಯರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದ್ದರಿಂದ ಕಾನಾನ್ಯರು ಎಫ್ರಾಯೀಮ್ಯರ ಮಧ್ಯದಲ್ಲೇ ವಾಸಿಸುವವರಾದರು.
Kannada BSI Bible 2016
ಇದಲ್ಲದೆ ಎಫ್ರಾಯಾಮ್‌ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಫ್ರಾಯೀಮ್ಯರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದದರಿಂದ ಅವರು ಅವರ ಮಧ್ಯದಲ್ಲೇ ವಾಸಿಸುವವರಾದರು.
Kannada Bible (KNCL) BSI 2016
ಎಫ್ರಯಿಮ್ ಕುಲದವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದುದರಿಂದ ಅವರು ಅವರ ನಡುವೆಯೇ ವಾಸಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಎಫ್ರಾಯೀಮ್ಯರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.