Judges 1:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಫ್ತಾಲ್ಯರಿಗೂ ಹೀಗೆಯೇ ಆಯಿತು. ನಫ್ತಾಲ್ಯರು ಅಲ್ಲಿಯ ಜನರನ್ನು ಬೇತ್‌ಷೆಮೆಷ್, ಬೇತನಾತ್ ನಗರಗಳಿಂದ ಹೊರದೂಡಲಿಲ್ಲ. ಹೀಗಾಗಿ ನಫ್ತಾಲ್ಯರು ಆ ನಗರಗಳ ಜನರೊಡನೆ ವಾಸಮಾಡ ತೊಡಗಿದರು. ಆ ಕಾನಾನ್ಯರು ನಫ್ತಾಲ್ಯರ ಗುಲಾಮರಾಗಿ ಕೆಲಸ ಮಾಡಿಕೊಂಡಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಫ್ತಾಲಿ ಕುಲದವರು ಬೇತ್ ಷೆಮೆಷ್, ಬೇತನಾತ್ ಎಂಬ ಊರುಗಳಲ್ಲಿ ಸ್ವಾಧೀನ ಮಾಡಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು ಮತ್ತು ಬೇತ್ ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು.
Kannada BSI Bible 2016
ನಫ್ತಾಲ್ಯರು ಬೇತ್‌ಷೆಮೆಷಿನ ವಾಸಿಗಳನ್ನೂ ಬೇತ ನಾತಿನ ವಾಸಿಗಳನ್ನೂ ಹೊರಡಿಸಿಬಿಡದೆ ಆ ದೇಶ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್‌ಷೆಮೆಷ್‌ ಬೇತನಾತನ ಪಟ್ಟಣವಾಸಿಗಳು ಅವರಿಗೆ ಕಪ್ಪಕೊಡುವವರಾದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಫ್ತಾಲ್ಯರು ಬೇತ್‍ಷೆಮೆಷ್, ಬೇತನಾತ್ ಎಂಬ ಊರುಗಳನ್ನು ಸ್ವತಂತ್ರಿಸಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು. ಮತ್ತು ಆ ಬೇತ್‍ಷೆಮೆಷ್ ಬೇತನಾತ್ ಊರುಗಳ ಜನರು ಅವರಿಗೆ ದಾಸರಾದರು.
Kannada Bible (KNCL) BSI 2016
ನಫ್ತಾಲಿ ಕುಲದವರು ಬೇತ್ ಷೆಮೆಷ್, ಬೇತನಾತ್ ಎಂಬ ಊರುಗಳನ್ನು ಸ್ವತಂತ್ರಿಸಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು. ಮತ್ತು ಆ ಬೇತ್ ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಫ್ತಾಲಿ ಗೋತ್ರದವರು ಬೇತ್ ಷೆಮೆಷ್ ವಾಸಿಗಳನ್ನೂ ಹೊರಡಿಸಿಬಿಡದೆ, ಆ ದೇಶವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್ ಷೆಮೆಷ್, ಬೇತ್ ಅನಾತ್ ಪಟ್ಟಣ ವಾಸಿಗಳು ಅವರಿಗೆ ದಾಸರಾದರು.