Judges 1:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೂದ್ಯರು ಜೆರುಸಲೇಮಿನ ವಿರುದ್ಧ ಯುದ್ಧಮಾಡಿ ಅದನ್ನು ಗೆದ್ದುಕೊಂಡರು. ಯೆಹೂದ್ಯರು ಜೆರುಸಲೇಮಿನ ಜನರನ್ನು ಖಡ್ಗಗಳಿಂದ ಕೊಂದು ನಗರವನ್ನು ಸುಟ್ಟುಹಾಕಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದ್ಯರು ಯೆರೂಸಲೇಮಿನವರೊಡನೆ ಯುದ್ಧಮಾಡಿ, ಅಲ್ಲಿನ ಜನರನ್ನು ಹಿಡಿದು ಕತ್ತಿಯಿಂದ ಸಂಹರಿಸಿ ಪಟ್ಟಣಕ್ಕೆ ಬೆಂಕಿಯಿಟ್ಟರು.
Kannada BSI Bible 2016
ಯೂದನ ಮಕ್ಕಳು ಯೆರೂಸಲೇಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದ್ಯರು ಯೆರೂಸಲೇವಿುನವರೊಡನೆ ಯುದ್ಧಮಾಡಿ ಅದನ್ನು ಹಿಡಿದು ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣಕ್ಕೆ ಬೆಂಕಿಹೊತ್ತಿಸಿದರು.
Kannada Bible (KNCL) BSI 2016
ಯೆಹೂದ ಕುಲದವರು ಜೆರುಸಲೇಮಿನೊಡನೆ ಯುದ್ಧಮಾಡಿದರು. ಆ ಜನರನ್ನು ಕತ್ತಿಗೆ ತುತ್ತಾಗಿಸಿ ಅವರ ಪಟ್ಟಣವನ್ನು ಸುಟ್ಟುಹಾಕಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೂದ ಗೋತ್ರದವರು ಯೆರೂಸಲೇಮಿನವರ ಮೇಲೆ ಯುದ್ಧಮಾಡಿ, ಅಲ್ಲಿದ್ದವರನ್ನು ಖಡ್ಗದಿಂದ ಸಂಹರಿಸಿ, ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.