Judges 10:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದೇ ವರ್ಷ ಅವರು ಜೋರ್ಡನ್ ನದಿಯ ಪೂರ್ವಕ್ಕಿರುವ ಗಿಲ್ಯಾದಿನಲ್ಲಿದ್ದ ಇಸ್ರೇಲರನ್ನು ನಾಶಮಾಡಿದರು. ಅದು ಮೊದಲು ಅಮೋರಿಯರ ಪ್ರದೇಶವಾಗಿತ್ತು. ಇಸ್ರೇಲರು ಹದಿನೆಂಟು ವರ್ಷಗಳವರೆಗೆ ಕಷ್ಟವನ್ನು ಅನುಭವಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ಅಂದಿನಿಂದ ಹದಿನೆಂಟು ವರ್ಷಗಳ ವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲರನ್ನು ಬಹಳವಾಗಿ ಪೀಡಿಸುತ್ತಾ, ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು.
Kannada BSI Bible 2016
ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್‌ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ಆ ವರುಷದಿಂದ ಹದಿನೆಂಟು ವರುಷಗಳವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲ್ಯರನ್ನು ಬಹಳವಾಗಿ ಪೀಡಿಸುತ್ತಾ ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು.
Kannada Bible (KNCL) BSI 2016
ಇವರು ಆ ವರ್ಷದಿಂದ ಹದಿನೆಂಟು ವರ್ಷಗಳವರೆಗೆ ಜೋರ್ಡನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಯೇಲರನ್ನು ಬಹಳವಾಗಿ ಪೀಡಿಸುತ್ತಾ ಅವರ ಮೇಲೆ ದಬ್ಬಾಳಿಕೆ ನಡೆಸಿದರು. ಈ ನಾಡು ಮೊದಲು ಅಮೋರಿಯರದಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರು ಆ ವರ್ಷ ಮೊದಲುಗೊಂಡು ಹದಿನೆಂಟು ವರ್ಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲರನ್ನೆಲ್ಲಾ ಬಾಧಿಸಿ ಕುಂದಿಸಿದರು.