Judges 11:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ ಟೋಬ್ ದೇಶದಲ್ಲಿ ವಾಸಮಾಡತೊಡಗಿದನು. ಟೋಬ್ ದೇಶದಲ್ಲಿ ಕೆಲವು ಪುಂಡರು ಯೆಫ್ತಾಹನ ಜೊತೆ ಸೇರಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತನ್ನ ಸಹೋದರರನ್ನು ಬಿಟ್ಟು ಟೋಬ್ ದೇಶಕ್ಕೆ ಹೋಗಲು ಅಲ್ಲಿನ ಕಾಕಪೋಕರು ಕೂಡಿ ಅವನನ್ನು ಹಿಂಬಾಲಿಸಿದರು.
Kannada BSI Bible 2016
ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ ಟೋಬ್‌ ದೇಶದಲ್ಲಿ ವಾಸವಾಗಿದ್ದನು; ಆ ಸ್ಥಳದ ನಿಷ್ಪ್ರಯೋಜಕ ಮನುಷ್ಯರು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನ ಸಂಗಡ ಹೊರಗೆ ಹೊರಡುತ್ತಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ಸಹೋದರರನ್ನು ಬಿಟ್ಟು ಟೋಬ್ ದೇಶಕ್ಕೆ ಹೋಗಲು ಅಲ್ಲಿನ ಕಾಕಪೋಕರು ಕೂಡಿ ಅವನನ್ನು ಹಿಂಬಾಲಿಸಿದರು.
Kannada Bible (KNCL) BSI 2016
ಅವನು ತನ್ನ ಸಹೋದರನನ್ನು ಬಿಟ್ಟು ಟೋಬ್ ದೇಶಕ್ಕೆ ಹೋದನು. ಅಲ್ಲಿನ ಪುಂಡಪೋಕರಿಗಳು ಕೂಡಿ ಅವನನ್ನು ಹಿಂಬಾಲಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ, ಟೋಬ್ ದೇಶದಲ್ಲಿ ವಾಸವಾಗಿದ್ದನು. ಆ ಸ್ಥಳದ ಪುಂಡಪೋಕರಿಗಳು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನನ್ನು ಹಿಂಬಾಲಿಸುತ್ತಿದ್ದರು.