Judges 11:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಜಯಶಾಲಿಯಾಗಿ ಬರುವಾಗ ನನ್ನ ಮನೆಯಿಂದ ಹೊರ ಬರುವ ಮೊದಲನೆಯ ಜೀವಿಯನ್ನು ನಿನಗೆ ಕೊಡುತ್ತೇನೆ. ನಾನು ಅದನ್ನು ಯೆಹೋವನ ಸರ್ವಾಂಗಹೋಮಕ್ಕೆ ಆಹುತಿಯಾಗಿ ಕೊಡುವೆನು” ಎಂದು ಹರಕೆ ಮಾಡಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು.
Kannada BSI Bible 2016
ನಾನು ಅಮ್ಮೋನನ ಮಕ್ಕಳ ಬಳಿಯಿಂದ ಸಮಾಧಾನದಲ್ಲಿ ತಿರಿಗಿ ಬರುವಾಗ ನನ್ನ ಮನೆಯ ಬಾಗಲಿಂದ ನನ್ನನ್ನು ಎದುರುಗೊಳ್ಳಲು ಬರುವಂಥದ್ದು ನಿಜವಾಗಿ ಕರ್ತನದಾಗಿರುವದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಸುರಕ್ಷಿತನಾಗಿ ಮನೆಗೆ ಮುಟ್ಟಿದಾಗ ನನ್ನನ್ನು ಎದುರುಗೊಳ್ಳುವದಕ್ಕಾಗಿ ನನ್ನ ಮನೆಯ ಬಾಗಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಹೋಮಮಾಡುವೆನು ಎಂದು ಹರಕೆಮಾಡಿದನು.
Kannada Bible (KNCL) BSI 2016
ನಾನು ಸುರಕ್ಷಿತವಾಗಿ ಹಿಂದಿರುಗುವಾಗ ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥ ಪ್ರಾಣಿ ತಮಗೆ ಮೀಸಲು ಎಂದೂ ಅದನ್ನು ತಮಗೆ ದಹನಬಲಿದಾನ ಮಾಡುವೆನು” ಎಂದೂ ಹರಕೆಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅಮ್ಮೋನಿಯರನ್ನು ಜಯಿಸಿ ಹಿಂತಿರುಗಿ ಬರುವಾಗ, ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥದ್ದು ಯೆಹೋವ ದೇವರದಾಗಿರುವುದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು,” ಎಂದನು.