Judges 11:37 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಫ್ತಾಹನ ಮಗಳು ತನ್ನ ತಂದೆಗೆ, “ನನಗೋಸ್ಕರ ಒಂದು ಕೆಲಸವನ್ನು ಮಾಡು. ಎರಡು ತಿಂಗಳುಗಳವರೆಗೆ ನನ್ನನ್ನು ಒಬ್ಬಂಟಿಗಳಾಗಿ ಇರಲು ಬಿಡು. ನಾನು ಬೆಟ್ಟಪ್ರದೇಶಕ್ಕೆ ಹೋಗುತ್ತೇನೆ. ನಾನು ಮದುವೆ ಮಾಡಿಕೊಳ್ಳುವುದಿಲ್ಲ ಮತ್ತು ಮಕ್ಕಳನ್ನು ಹೆರುವದಿಲ್ಲ. ನಾನು ಮತ್ತು ನನ್ನ ಗೆಳತಿಯರು ಹೋಗಿ ಒಟ್ಟಾಗಿ ಅಳುತ್ತೇವೆ” ಎಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ತಿರುಗಿ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಲಾಲಿಸು; ಎರಡು ತಿಂಗಳುಗಳ ಕಾಲ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ, ನನ್ನ ಕನ್ಯಾವಸ್ಥೆಗೋಸ್ಕರ ಗೋಳಾಡುವೆನು” ಎಂದಳು.
Kannada BSI Bible 2016
ಇದಲ್ಲದೆ ಅವಳು ತನ್ನ ತಂದೆಗೆ --ಈ ಕಾರ್ಯವು ನನಗೆ ಆಗಲಿ; ಆದರೆ ನಾನು ನನ್ನ ಗೆಳತಿಯರೊಡನೆ ನನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಹೋಗಿ ಗೋಳಾಡುವಂತೆ ಎರಡು ತಿಂಗಳುಗಳ ವರೆಗೆ ನನ್ನನ್ನು ಬಿಡು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ತಿರಿಗಿ ತನ್ನ ತಂದೆಗೆ - ನನ್ನ ಬಿನ್ನಹವನ್ನು ಲಾಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗೋಸ್ಕರ ಗೋಳಾಡುವೆನು ಅನ್ನಲು ಅವನು -
Kannada Bible (KNCL) BSI 2016
ಆಕೆ ಪುನಃ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಆಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು, ನಾನು ನನ್ನ ಗೆಳತಿಯರೊಡನೆ ಗುಡ್ಡಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗಾಗಿ ಗೋಳಾಡುವೆನು,” ಎಂದಳು. ಅವನು, “ಎರಡು ತಿಂಗಳ ತನಕ ಹೋಗಿ ಬಾ,” ಎಂದು ಹೇಳಿ ಕಳುಹಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವಳು ತನ್ನ ತಂದೆಗೆ, “ಈ ಕಾರ್ಯವು ನನಗೆ ಆಗಲಿ. ಆದರೆ ನಾನೂ, ನನ್ನ ಗೆಳತಿಯರೂ ಕೂಡ ನನ್ನ ಕನ್ಯಾವಸ್ಥೆಗಾಗಿ ಬೆಟ್ಟಗಳ ಮೇಲೆ ಹೋಗಿ, ನನ್ನ ಗೆಳತಿಯರ ಸಂಗಡ ಅಳುವುದಕ್ಕೆ ನನಗೆ ಎರಡು ತಿಂಗಳು ಸಮಯವನ್ನು ಕೊಡು,” ಎಂದಳು.