Judges 13:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಮಾನೋಹನು ಯೆಹೋವನ ದೂತನಿಗೆ, “ನೀನು ಸ್ವಲ್ಪಹೊತ್ತು ಇಲ್ಲಿಯೇ ಇರಬೇಕೆಂಬುದು ನಮ್ಮ ಇಚ್ಛೆ. ನಾವು ನಿನ್ನ ಊಟಕ್ಕಾಗಿ ಒಂದು ಮರಿಹೋತವನ್ನು ಬೇಯಿಸಿ ಬಡಿಸುತ್ತೇವೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತು ಮಾನೋಹನು ಯೆಹೋವನ ದೂತನನ್ನು, “ನಾವು ನಿನಗೋಸ್ಕರ ಒಂದು ಹೋತಮರಿಯನ್ನು ಪಕ್ವಮಾಡಿ ತರುವವರೆಗೆ ದಯವಿಟ್ಟು ಇಲ್ಲೇ ನಿಲ್ಲಬೇಕು” ಎಂದು ಬೇಡಿಕೊಂಡನು.
Kannada BSI Bible 2016
ಮಾನೋ ಹನು ಕರ್ತನ ದೂತನಿಗೆ--ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವ ವರೆಗೆ ನಿನ್ನನ್ನು ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಮಾನೋಹನು ಯೆಹೋವನ ದೂತನನ್ನು - ನಾವು ನಿನಗೋಸ್ಕರ ಒಂದು ಹೋತಮರಿಯನ್ನು ಪಕ್ವಮಾಡಿ ತರುವವರೆಗೂ ದಯವಿಟ್ಟು ಇಲ್ಲೇ ನಿಲ್ಲಬೇಕೆಂದು ಬೇಡಿಕೊಳ್ಳಲು
Kannada Bible (KNCL) BSI 2016
ಮತ್ತೆ ಮಾನೋಹನು ಸರ್ವೇಶ್ವರನ ದೂತನನ್ನು, “ನಾವು ನಿಮಗಾಗಿ ಒಂದು ಹೋತಮರಿಯನ್ನು ಅಡಿಗೆ ಮಾಡಿ ತರುವವರೆಗೆ ದಯವಿಟ್ಟು ಇಲ್ಲೇ ನಿಲ್ಲಬೇಕು ಎಂದು ಬೇಡಿಕೊಂಡನು. ಅವನು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಾನೋಹನು ಯೆಹೋವ ದೇವರ ದೂತನಿಗೆ, “ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವವರೆಗೆ ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ,” ಎಂದನು.