Judges 14:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಂಸೋನನು ತನ್ನ ತಂದೆತಾಯಿಗಳೊಂದಿಗೆ ತಿಮ್ನಾ ನಗರಕ್ಕೆ ಹೋದನು. ಅವರು ನಗರದ ಸಮೀಪದ ದ್ರಾಕ್ಷಿತೋಟಗಳವರೆಗೆ ಹೋದರು. ಅಲ್ಲಿ ಹಠಾತ್ತಾಗಿ ಒಂದು ಪ್ರಾಯದ ಸಿಂಹವು ಬರ್ಜಿಸಿ ಸಂಸೋನನ ಮೇಲೆ ಬಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಂಸೋನನು ತನ್ನ ತಂದೆತಾಯಿಗಳ ಸಹಿತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿ ತೋಟಗಳ ಬಳಿಗೆ ಬಂದಾಗ, ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು.
Kannada BSI Bible 2016
ಆಗ ಸಂಸೋನನೂ ಅವನ ತಂದೆತಾಯಿಯೂ ತಿಮ್ನಾಗೆ ಹೋಗುತ್ತಿದ್ದರು. ಅವರು ತಿಮ್ನಾದ ದ್ರಾಕ್ಷೇ ತೋಟಗಳ ಬಳಿಗೆ ಬಂದಾಗ ಇಗೋ, ಪ್ರಾಯದ ಸಿಂಹವು ಅವನ ಎದುರಿಗೆ ಬಂದು ಗರ್ಜಿಸಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಂಸೋನನು ತನ್ನ ತಂದೆತಾಯಿಗಳ ಸಹಿತವಾಗಿ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷೇತೋಟಗಳ ಬಳಿಗೆ ಬಂದಾಗ ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು.
Kannada Bible (KNCL) BSI 2016
ಸಂಸೋನನು ತನ್ನ ತಂದೆತಾಯಿಗಳ ಸಮೇತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿತೋಟಗಳ ಬಳಿಗೆ ಬಂದನು. ಅಲ್ಲಿ ಒಂದು ಪ್ರಾಯದ ಸಿಂಹ ಗರ್ಜಿಸುತ್ತಾ ಅವನೆದುರಿಗೆ ಬಂದಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸಂಸೋನನೂ, ಅವನ ತಂದೆತಾಯಿಗಳೂ ತಿಮ್ನಾತಿಗೆ ಹೋಗುತ್ತಿದ್ದರು. ಅವರು ತಿಮ್ನತಿನ ದ್ರಾಕ್ಷಿತೋಟಗಳ ಬಳಿಗೆ ಬಂದಾಗ, ಪ್ರಾಯದ ಸಿಂಹವು ಗರ್ಜಿಸುತ್ತಾ ಅವನ ಎದುರಿಗೆ ಬಂದಿತು.