Judges 14:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೆಲವು ದಿನಗಳಾದ ಮೇಲೆ ಸಂಸೋನನು ಆ ಫಿಲಿಷ್ಟಿಯ ಸ್ತ್ರೀಯನ್ನು ಮದುವೆಯಾಗುವುದಕ್ಕೋಸ್ಕರ ತಿರುಗಿ ಹೋಗುತ್ತಿದ್ದನು. ದಾರಿಯಲ್ಲಿ ಅವನು ಆ ಸತ್ತಸಿಂಹವನ್ನು ನೋಡುವುದಕ್ಕೆ ಹೋದನು. ಅವನು ಆ ಸತ್ತ್ತಸಿಂಹದ ದೇಹದಲ್ಲಿ ಒಂದು ಜೇನುಗೂಡನ್ನು ಕಂಡನು. ಅದರಲ್ಲಿ ಜೇನುತುಪ್ಪವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲವು ದಿನಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕೋಸ್ಕರ ತಿರುಗಿ ಆ ಊರಿಗೆ ಹೋಗುತ್ತಿದ್ದಾಗ ದಾರಿಯ ಸಮೀಪದಲ್ಲಿ ಬಿದ್ದಿದ್ದ ಸಿಂಹದ ಹೆಣವನ್ನು ನೋಡುವುದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ, ಜೇನನ್ನೂ ಕಂಡು,
Kannada BSI Bible 2016
ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ತಕ್ಕೊಳ್ಳುವದಕ್ಕೆ ತಿರಿಗಿ ಬರುವಾಗ ಸಿಂಹದ ಹೆಣವನ್ನು ನೋಡಲು ಪಕ್ಕಕ್ಕೆ ಹೋದನು. ಇಗೋ, ಸಿಂಹದ ಹೆಣದಲ್ಲಿ ಜೇನು ಹುಳಗಳೂ ಜೇನೂ ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವದಕ್ಕೋಸ್ಕರ ತಿರಿಗಿ ಆ ಊರಿಗೆ ಹೋಗುತ್ತಿದ್ದಾಗ ದಾರೀ ಬಿಟ್ಟು ಸಿಂಹದ ಹೆಣವನ್ನು ನೋಡುವದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ ಜೇನನ್ನೂ ಕಂಡು
Kannada Bible (KNCL) BSI 2016
ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕಾಗಿ ಮತ್ತೆ ಆ ಊರಿಗೆ ಹೋಗುತ್ತಿದ್ದಾಗ, ದಾರಿ ಬಿಟ್ಟು, ಸಿಂಹದ ಹೆಣವನ್ನು ನೋಡುವುದಕ್ಕೆ ಹೋದನು. ಅದರ ಒಡಲಲ್ಲಿ ಜೇನುಹುಳುಗಳನ್ನೂ ಜೇನನ್ನೂ ಕಂಡು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ತಿರುಗಿ ಬರುವಾಗ, ಸಿಂಹದ ಹೆಣವನ್ನು ನೋಡುವುದಕ್ಕೆ ಪಕ್ಕಕ್ಕೆ ಹೋದಾಗ, ಸಿಂಹದ ಹೆಣದಲ್ಲಿ ಜೇನುಹುಳಗಳನ್ನು ಮತ್ತು ಜೇನನ್ನು ಕಂಡನು.