Judges 14:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಂಸೋನನು ತನ್ನ ಕೈಯಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾ ನಡೆದನು. ತಂದೆತಾಯಿಗಳ ಹತ್ತಿರ ಬಂದು ಅವರಿಗೆ ಸ್ವಲ್ಪ ಜೇನುತುಪ್ಪವನ್ನು ಕೊಟ್ಟನು. ಅವರೂ ತಿಂದರು. ಆದರೆ ಆ ಸತ್ತಸಿಂಹದ ದೇಹದಿಂದ ಜೇನುತುಪ್ಪವನ್ನು ತೆಗೆದುಕೊಂಡ ಸಂಗತಿಯನ್ನು ಸಂಸೋನನು ಅವರಿಗೆ ಹೇಳಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರೂ ತಿಂದರು. ಆದರೆ ಸತ್ತ ಸಿಂಹದ ದೇಹದಿಂದ ತಾನು ಜೇನು ತೆಗೆದುಕೊಂಡನೆಂದು ಅವರಿಗೆ ತಿಳಿಸಲಿಲ್ಲ.
Kannada BSI Bible 2016
ಅದನ್ನು ಅವನು ತನ್ನ ಕೈಗಳಲ್ಲಿ ತೆಗೆದುಕೊಂಡು ತಿನ್ನುತ್ತಾ ತನ್ನ ತಂದೆ ತಾಯಿಗಳ ಬಳಿಗೆ ಹೋಗಿ ಅವರಿಗೂ ಕೊಟ್ಟನು; ಅವರೂ ತಿಂದರು. ಆದರೆ ಸಿಂಹದ ಹೆಣದಲ್ಲಿ ತಾನು ಜೇನು ತೆಗೆದುಕೊಂಡೆನೆಂದು ಅವರಿಗೆ ತಿಳಿಸಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರು ತಿಂದರು. ಆದರೆ ಅದು ತನಗೆ ಸಿಂಹದ ಒಡಲಲ್ಲಿ ಸಿಕ್ಕಿತೆಂಬದನ್ನು ಅವರಿಗೆ ತಿಳಿಸಲಿಲ್ಲ.
Kannada Bible (KNCL) BSI 2016
ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರೂ ತಿಂದರು. ಆದರೆ ಅದು ತನಗೆ ಸಿಂಹದ ಒಡಲಲ್ಲಿ ಸಿಕ್ಕಿತೆಂಬುದನ್ನು ಅವರಿಗೆ ತಿಳಿಸಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದನ್ನು ಅವನು ತನ್ನ ಕೈಗಳಲ್ಲಿ ತೆಗೆದುಕೊಂಡು ತಿನ್ನುತ್ತಾ, ತನ್ನ ತಂದೆತಾಯಿಗಳ ಬಳಿಗೆ ಹೋಗಿ ಅವರಿಗೂ ಕೊಟ್ಟನು; ಅವರೂ ತಿಂದರು. ಆದರೆ ಸಿಂಹದ ಹೆಣದಿಂದ ತಾನು ಜೇನು ತೆಗೆದುಕೊಂಡೆನೆಂದು ಅವರಿಗೆ ತಿಳಿಸಲಿಲ್ಲ.