Judges 15:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡಲು ಹೋದನು. ಅವನು ತನ್ನ ಸಂಗಡ ಒಂದು ಮರಿಹೋತವನ್ನು ತೆಗೆದುಕೊಂಡು ಹೋದನು. ಆಕೆಯ ತಂದೆಗೆ ಅವನು, “ನನ್ನ ಹೆಂಡತಿಯ ಕೋಣೆಗೆ ಹೋಗಬೇಕು” ಎಂದನು. ಆದರೆ ಆಕೆಯ ತಂದೆಯು ಸಂಸೋನನನ್ನು ಒಳಗೆ ಬಿಡಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ, “ನಾನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗುತ್ತೇನೆ” ಅಂದನು. ಅದಕ್ಕೆ ಅವನು, “ಹೋಗಬಾರದು;
Kannada BSI Bible 2016
ಕೆಲವು ದಿನಗಳ ತರುವಾಯ ಆದದ್ದೇನಂದರೆ, ಗೋಧಿಯ ಸುಗ್ಗೀ ಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡು ಹೋಗಿ ಅವನು--ನನ್ನ ಹೆಂಡತಿಯ ಬಳಿಗೆ ಕೊಠಡಿಯಲ್ಲಿ ಪ್ರವೇಶಿಸುತ್ತೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ - ನನ್ನನ್ನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗಗೊಡಿಸು ಅನ್ನಲು ಅವನು - ಹೋಗಬಾರದು;
Kannada Bible (KNCL) BSI 2016
ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೆ ಹೋದನು. ಆಕೆಯ ತಂದೆ ಬಳಿಗೆ ಬಂದನು; “ನನ್ನ ಹೆಂಡತಿಯ ಒಳಗಿನ ಕೋಣೆಗೆ ಹೋಗಬಿಡು,” ಎಂದನು. ಅವನು, “ಹೋಗಕೂಡದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸ್ವಲ್ಪ ಸಮಯವಾದ ತರುವಾಯ, ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವುದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡುಹೋಗಿ, ಅವಳ ತಂದೆಗೆ, “ನನ್ನ ಹೆಂಡತಿಯ ಕೋಣೆಗೆ ಹೋಗುತ್ತೇನೆ,” ಎಂದನು.