Judges 15:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಸಂಸೋನನಿಗೆ, “ನೀನು ಅವಳನ್ನು ದ್ವೇಷಿಸುವೆ ಎಂದು ತಿಳಿದು ಮದುವೆಯಲ್ಲಿ ನಿನ್ನೊಂದಿಗಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಮದುವೆ ಮಾಡಿಕೊಟ್ಟೆ. ಅವಳ ತಂಗಿಯು ಆಕೆಗಿಂತ ಹೆಚ್ಚು ಸುಂದರಿಯಾಗಿದ್ದಾಳೆ. ಆಕೆಯನ್ನು ನೀನು ಮದುವೆಯಾಗು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಿಜವಾಗಿ ಆಕೆಯನ್ನು ಹಗೆಮಾಡುತ್ತೀಯೆಂದು ತಿಳಿದು ಅವಳನ್ನು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ” ಅಂದನು.
Kannada BSI Bible 2016
ಆದರೆ ಅವಳ ತಂದೆಯು ಅವನನ್ನು ಪ್ರವೇಶಿಸಗೊಡದೆ ಅವನಿಗೆ--ನೀನು ಅವ ಳನ್ನು ಪೂರ್ಣವಾಗಿ ಹಗೆಮಾಡಿದಿ ಎಂದು ನಾನು ನಿಜವಾಗಿ ತಿಳಿದು ಅವಳನ್ನು ನಿನ್ನ ಜೊತೆಯವನಿಗೆ ಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರವಾಗಿ ದ್ದಾಳಲ್ಲವೋ? ಅವಳಿಗೆ ಬದಲಾಗಿ ಇವಳನ್ನು ತಕ್ಕೋ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿಜವಾಗಿ ಆಕೆಯನ್ನು ಹಗೆ ಮಾಡುತ್ತೀಯೆಂದು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿ ಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ ಅಂದನು.
Kannada Bible (KNCL) BSI 2016
ನೀನು ನಿಜವಾಗಿ ಆಕೆಯನ್ನು ದ್ವೇಷಮಾಡುತ್ತೀಯೆಂದು ನಿನ್ನ ಆಪ್ತರೊಬ್ಬನಿಗೆ ಮದುವೆಮಾಡಿಕೊಟ್ಟೆ. ಆಕೆಯ ತಂಗಿ ಆಕೆಗಿಂತ ಸುಂದರಿಯಾಗಿದ್ದಾಳೆ; ಈಕೆ ನಿನಗೆ ಇರಲಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವಳ ತಂದೆಯು ಅವನನ್ನು ಅನುಮತಿಸದೆ ಅವನಿಗೆ, “ನೀನು ಅವಳನ್ನು ಪೂರ್ಣವಾಗಿ ಹಗೆ ಮಾಡಿದೆ ಎಂದು ನಾನು ನಿಜವಾಗಿ ತಿಳಿದು, ಅವಳನ್ನು ನಿನ್ನ ಜೊತೆಯವನಿಗೆ ಮದುವೆ ಮಾಡಿಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರಿಯಾಗಿದ್ದಾಳೆ. ಅವಳಿಗೆ ಬದಲಾಗಿ ಇವಳನ್ನು ಮದುವೆಯಾಗು,” ಎಂದನು.